Home ನಿಮ್ಮ ಜಿಲ್ಲೆ ಬೀದರ ಬೀದರ ಜಿಲ್ಲೆಯಲ್ಲಿ ಮತ್ತೆ 13 ಪ್ರಕರಣ ಪತ್ತೆ

ಬೀದರ ಜಿಲ್ಲೆಯಲ್ಲಿ ಮತ್ತೆ 13 ಪ್ರಕರಣ ಪತ್ತೆ

ಬೀದರ ಜಿಲ್ಲೆಯಲ್ಲಿ ಮತ್ತೆ 13 ಪ್ರಕರಣ ಪತ್ತೆ

ಬೀದರ: ಕೋವಿಡ್-19 ಸೋಂಕು ಬೀದರ್ ಜಿಲ್ಲೆಗೆ ಬಿಟ್ಟುಬಿಡದಂತೆ ಕಾಡುತ್ತಿದ್ದು, ಬುಧವಾರ ಮತ್ತೆ ಜಿಲ್ಲೆಯಲ್ಲಿ 13 ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಸೋಂಕಿನ ಲಕ್ಷಣ ಹೊಂದಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದೀಗ ಹೆಲ್ತ್ ಬುಲೆಟನ್ ಪೆ.1712  (49) ವರ್ಷದ ವ್ಯಕ್ತಿ ವಿವಿಧ ರೋಗಗಳಿಂದ ಬಳಲುತ್ತಿರುವ ಕಾರಣದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬರುತ್ತಿದ್ದು, ಸಧ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆಯಾದ ಬಸವಕಲ್ಯಾಣ ತಾಲೂಕಿನ ಕೊಹಿನೂರು, ಶಿರಗುರ, ಗದಲೆಗಾಂವ್(ಕೆ), ಬಟಗೇರಾ, ಲಾಡವಂತಿ ಹಾಗೂ ಅಟ್ಟೂರ, ಹುಮನಾಬಾದ ಪಟ್ಟಣದ ಬಡಾವಣೆಯೊಂದು ಕೂಡ ಸೀಲ್ ಅಧಿಕಾರಿಗಳು ಸೀಲ್ ಡೌನ್ ಮಾಡುತ್ತಿದ್ದಾರೆ.

ಬುಧವಾರ ಬೆಳಿಗ್ಗೆ 11 ಪ್ರಕರಣಗಳು ಪತ್ತೆಯಾಗಿದವು. ಸಂಜೆಗೆ ಹುಮನಾಬಾದ ಪಟ್ಟಣದ 84 ವರ್ಷದ ಮಹಿಳೆಗೆ ಸೋಂಕಿರುವುದು ದೃಡಪಟ್ಟಿದ್ದು, ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಹುಮನಾಬಾದ ಪ್ರಕರಣದ ಹಿನ್ನೆಲೆ ನೋಡುವುದಾದರೆ ಮುಂಬೈಯಿಂದ ಮೆ.18ರಂದು ಖಾಸಗಿ ಬಸ್ ಮೂಲಕ 34 ಜನರು ಪ್ರಯಾಣಮಾಡಿ ಬಂದಿದ್ದು, ಇದೀಗ ಮಹಿಳೆಯೊಬ್ಬಳಿಗೆ ಪಾಸಿಟಿವ್ ಬಂದಿದೆ. ಉಳಿದಂತೆ ಎಲ್ಲಾ ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Date:27-05-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…