ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..?
ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..?
ಬೀದರ: ಚಿಟಗುಪ್ಪ ಪಟ್ಟಣದಲ್ಲಿ ಬುಧವಾರ ರಾತ್ರೆ ಮಿಡತೆಗಳಂತೆ ಇರುವ ಕೀಟಗಳು ಕಂಡುಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಬುಧವಾರ ರಾತ್ರಿ ಸುಮಾರ 9 ಗಂಟೆಯಿಂದ ಪಟ್ಟಣದ ವಿವಿಧಡೆ ಈ ಕೀಟಗಳು ಕಂಡುಬಂದಿದ್ದು, ಸಾರ್ವಜನಿಕರ ಮನೆಯ ಗೋಡೆಗಳ ಮೇಲೆ ಗಿಡಗಳಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಈ ಕೀಟಗಳು ಕಂಡುಬಂದಿದ್ದು, ಜನರು ಮನೆಯ ಹೊರಗೆ ಬಂದು ಕೀಟಗಳನ್ನು ನೋಡಿ ಗಾಬರಿಗೊಂಡಿದ್ದಾರೆ.
ಶಿವನ ಕುದುರೆಯಂತೆ ಇರುವ ಈ ಕೀಟವು ಹಸಿರು ಬಣ್ಣದಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿದೆ. ಗುಂಪುಗುಂಪಾಗಿ ಕಂಡುಬರುತ್ತಿವೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಾತ್ರ ಕೀಟಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















