Home ನಿಮ್ಮ ಜಿಲ್ಲೆ ಕಲಬುರಗಿ ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ : ಮಲೀಕಯ್ಯ ಗುತ್ಯೇದಾರ್

ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ : ಮಲೀಕಯ್ಯ ಗುತ್ಯೇದಾರ್

ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ : ಮಲೀಕಯ್ಯ ಗುತ್ಯೇದಾರ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಮಲೀಕಯ್ಯ ಗುತ್ತೇದಾರ್ ಕಲಬುರಗಿ ಭಾಗದ ದಾಲ್ ಮಿಲ್ ಅಸೋಶಿಯೇಶನ್ ಮುಖಂಡರಿಗೆ ಭರವಸೆ ನೀಡಿದ್ದಾರೆ.
ವಾರ್ಷಿಕ 25 ಕೋಟಿ ವ್ಯವಹಾರ ಹೊಂದಿದ ದಾಲ್ ಮಿಲ್ ಗಳು ಮಾತ್ರ ನಾಗರಿಕ ಸರಬರಾಜು ಇಲಾಖೆಯ ಟೆಂಡರ್ ಗಳ್ಳಿ ಭಾಗವಿಸಲು ಅವಕಾಶ ಕಲ್ಪಿಸಿರುವುದನ್ನು ಖಂಡಿಸಿ 5 ಕೋಟಿ ವ್ಯವಹಾರ ಹೊಂದಿದ ಎಲ್ಲಾ ದಾಲ್ ಮಿಲ್ ಗಳು ಟೆಂಡರ್ಗಳಲ್ಲಿ ಭಾಗವಿಸಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಮತ್ರಿಗಳಿಗೆ ಪತ್ರ ಬರೆದು ಗಮನ ಸೇಳೆದ ಹಿನ್ನೆಲೆಯಲ್ಲಿ ದಾಲ್ ಮಿಲ್ ಅಸೋಸಿಯೇಶನ್ ಸದಸ್ಯರು ಮಾಜಿ ಸಚಿವರನ್ನು ಸನ್ಮಾನಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಸಂದರ್ಭದಲ್ಲಿ ಅವರು ದಾಲ್ ಮಿಲ್ ಗಳ ಮಾಲೀಕರಿಗೆ ನ್ಯಾಯ ಕೂಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಮನವರಿಕೆ ಮಾಡುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ದಾಲ್ ಮಿಲ್ ಮಾಲೀಕರು ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರದಿದ ಆಗುತ್ತಿರುವ ತೊಡಕುಗಳ ಕುರಿತು ಚರ್ಚೆ ನಡೆಸಿದರು.

Date: 06-08-2020    www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…