ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ
![]()
ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ
ಬೀದರ/ಜುಲೈ-03: ಜಿಲ್ಲೆಯ ವಿವಿಧಡೆ ಅನಧಿಕೃತ ಬಯೋಡೀಸೆಲ್ ಮಾರಾಟದ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ ಅವರು ಜಿಲ್ಲೆಯ ಎಲ್ಲಾ ತಹಸೀಲ್ದಾರ ಅವರಿಗೆ ಪತ್ರ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ಕಚ್ಚಾ ತೈಲ ಮಾರಾಟಕ್ಕೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಅನಧಿಕೃತ ಸ್ಥಳದಲ್ಲಿ ಲಾರಿಗಳಿಗೆ ಕಚ್ಚಾ ತೈಲ ಹಾಕುತ್ತಿರುವ ಬಗ್ಗೆ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಲು ಖುದ್ದು ಭೇಟಿನೀಡಿ ರೇಡ್ ಮಾಡುವ ಮೂಲಕ ಪರಿಶೀಲನೆ ನಡೆಸಬೇಕು. ಕೈಗೊಂಡ ಕ್ರಮದ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
https://play.google.com/store/apps/details?id=kknewsonline.in ಈ ಕುರಿತು ಮಾಹಿತಿ ನೀಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ, ಜೈವಿಕ್ ಇಂಧನ ಕುರಿತು 2019ರಲ್ಲಿ ವಿಶೇಷ ಅಧಿಸೂಚನೆ ಸರಕಾರದಿಂದ ಹೊರಡಿಸಲಾಗಿದೆ. ಕೈಗಾರಿಕಾ ಸೇರಿದಂತೆ ಇತರೆ ಕಡೆಗಳಲ್ಲಿ ಜೈವಿಕ್ ಇಂಧನ ಬಳಕ್ಕೆಗೆ ಅವಕಾಶ ನೀಡಲಾಗಿದೆ. ಕೈಗಾರಿಕೆಗಳ ಹೆಸರಲ್ಲಿ ವ್ಯಾಣಿಜ ವಾಹನಗಳಿಗೆ ಬಳಕೆ ಮಾಡುವುದು ತಪ್ಪು. ಈ ಕುರಿತು ಈಗಾಗಲೇ ಬಸವಕಲ್ಯಾಣ ತಾಲೂಕಿನಲ್ಲಿನ ಕ್ರಮ ವಹಿಸಲಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯ ತರೆ ಕಡೆಗಳಲ್ಲಿ ಕೂಡ ಕ್ರಮ ವಹಿಸಲಾಗುವುದು.
Date: 03-07-2021 : Time : 10:15 am : www.kknewsonline.in

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















