ಜಿಲ್ಲಾ ಬಿಜೆಪಿ ಭವನ ಕಟ್ಟಡ ನಿರ್ಮಾಣಕ್ಕೆ ಶರಣು ಸಲಗರ 5.11 ಲಕ್ಷ ರೂ. ದೇಣಿಗೆ
ಜಿಲ್ಲಾ ಬಿಜೆಪಿ ಭವನ ಕಟ್ಟಡ ನಿರ್ಮಾಣಕ್ಕೆ ಶರಣು ಸಲಗರ 5.11 ಲಕ್ಷ ರೂ. ದೇಣಿಗೆ
ಸವಕಲ್ಯಾಣ: ಬಿಜೆಪಿ ಜಿಲ್ಲಾ ಭವನ ನಿರ್ಮಾಣಕ್ಕೆ ಬಿಜೆಪಿ ಮುಖಂಡ ಶರಣು ಸಲಗರ 5.11 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.
5.11 ಲಕ್ಷದ ಡಿಡಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರಿಗೆ ನೀಡಿದರು. ಬೀದರ್ ಭಾಲ್ಕಿ ರಸ್ತೆಯ ನೌಬಾದ್ ಹತ್ತಿರ ಬಿಜೆಪಿ ಜಿಲ್ಲಾ ಭವನ ಕಟ್ಟಡ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆ.14ರಂದು ಬೀದರನಲ್ಲಿ ಆಯೋಜಿಸಿದ್ದ ಭವನದ ಕಟ್ಟಡ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶರಣು ಸಲಗರ ಅವರು ಭವನ ನರ‍್ಮಾಣಕ್ಕೆ ವೈಯಕ್ತಿಕವಾಗಿ 5.11 ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು. ಇದೀಗ ನುಡಿದಂತೆ 5.11 ಲಕ್ಷದ ಡಿಡಿ ಪಕ್ಷದ ಮುಖಂಡರಿಗೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕರ‍್ಯಕಾರಿಣಿ ಸದಸ್ಯ ರಾಜಕುಮಾರ ಸಿರಗಾಪೂರ ಭವನದ ನಿರ್ಮಾಣಕ್ಕಾಗಿ 51 ಸಾವಿರ ರೂ. ದೇಣಿಗೆಯಾಗಿ ನೀಡಿದರು. ಸಂಸದ ಭಗವಂತ ಖೂಬಾ, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ್ ಕಲ್ಲೂರ, ಜಿ.ಪಂ.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುಂಬಾರ, ಬಸವರಾಜ ಆರ್ಯ, ಸದಾನಂದ ಪಾಟೀಲ್, ಶಿವಕುಮಾರ ಶೇಟಗಾರ, ರತಿಕಾಂತ್ ಕೋಹಿನೂರ, ಸಂಜು ಮೂಲಗೆ ಇದ್ದರು.
Click Here for Mobile App : https://play.google.com/store/apps/details?id=kknewsonline.in
Date: 26-08-2020 www:kknewsoniline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















