Home ನಿಮ್ಮ ಜಿಲ್ಲೆ ಕಲಬುರಗಿ ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?

ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?

ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?

ಕಲಬುರಗಿ: ರಾಜ್ಯ ಸರ್ಕಾರದ ಹಲವು ಇಲಾಖೆ ಹಾಗೂ ಸಚಿವಾಲಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಒಂದೆಡೆ ಸುತ್ತೋಲೆ ಹೊರಡಿಸಿದರೆ ಇನ್ನೊಂದೆಡೆ ನೀವೃತ್ತ ಅಧಿಕಾರಿಗಳಿಗೆ ನೇಮಕಕ್ಕೆ ಸಚಿವರು ಶಿಫಾರಸು ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೌದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ್ ಅವರು ನಿವೃತ್ತಿ ಜತೆಗೆ ಗುತ್ತಿಗೆ ಆಧಾರದ ಮೇಲಿನ ಹುದ್ದೆಯಿಂದ ಬಿಡುಗಡೆಯಾಗಿರುವ ಅಧಿಕಾರಿಯನ್ನು ಮರಳಿ ಸೇವೆಗೆ ನಿಯಸಮ ಅನುಸಾರ ಕ್ರಮ ವಹಿಸುವಂತೆ ಶಿಫಾರಸು ಪತ್ರ ನೀಡಿರುವುದು ಇದೀಗ ಎಲ್ಲಡೆ ಚರ್ಚೆ ನಡೆದಿದೆ. ಹಾಗಾದರೆ, ಯಾವ ಕಾರಣಕ್ಕೆ ಸರ್ಕಾರ ಸುತ್ತೋಲೆ ಹೊಡೆಸಿತ್ತು? ಮುಖ್ಯಮಂತ್ರಿಗಳ ಟಿಟ್ಟಣಿಗೂ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸುವಂತಾಗಿದೆ.

ಆರೋಗ್ಯ ಇಲಾಖೆಯಲ್ಲಿ ಡಿಎಚ್ ಒ ಆಗಿ ಜತೆಗೆ ಜಯದೇವದಲ್ಲಿ ಲೈಜನ್ ಆಫೀಸರ್ ಎಂದು ಸೇವೆ ಸಲ್ಲಿಸಿದ್ದ 68 ವರ್ಷದ ವೈದ್ಯಾಧಿಕಾರಿಯನ್ನು ಕಳೆದ ಜ.31ರಂದೇ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ಈಗ ಅವರನ್ನೇ ಮತ್ತೆ ಲೈಜನ್ ಆಫೀಸರ್ ಎಂದು ತೆಗೆದುಕೊಳ್ಳುವಂತೆ ಜಯದೇವ ಸಂಸ್ಥೆ ನಿರ್ದೇಶಕರಿಗೆ ಸಚಿವರು ಶಿಫಾರಸು ಮಾಡಿರುವ ಪತ್ರ ಬಹಿರಂಗವಾಗಿದ್ದು, ಸಂಸ್ಥೆಯಲ್ಲಿನ ಅಧಿಕಾರಿಗಳಿಗೆ ಅಸಮಾಧಾನ ಉಂಟುಮಾಡುತ್ತಿದೆ. ಸಂಸ್ಥೆಯಲ್ಲಿ ಅರ್ಹತೆ ಹೊಂದಿದ ಅಧಿಕಾರಿಗಳು ಇಲ್ಲವೇ? ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ.

ಕೆಲ ಮಾಧ್ಯಮಗಳ ಪ್ರಕಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ| ಕೆ.ಎಸ್.ರವೀಂದ್ರನಾಥ್ ಅವರು, ಜಯದೇವ ಸಂಸ್ಥೆಯಲ್ಲಿ ನಿವೃತ್ತರನ್ನು ಮುಂದುವರಿಸಬೇಕೋ ಇಲ್ಲವೇ ಕೈಬಿಡಬೇಕೋ ಎಂಬುದನ್ನು ವಿವರಣೆಯೊಂದಿಗೆ ಪತ್ರ ಪರೆದು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ಇಲಾಖೆಯಿಂದ ಬಿಡುಗಡೆಯಾಗಿರುವ ನಿವೃತ್ತರ ಮರು ನೇಮಕದ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಹಾಗಾದರೇ ಸರ್ಕಾರದ ನಿತಿ ನಿಯಮಗಳು ಅಧಿಕಾರಿಗಳು ಪಾಲನೆಗೆ ಯಾಕೆ ಮುಂದಾಗುತ್ತಿಲ್ಲ. ದಿನಾಂಕ 15-04-2024ರಂದು ವೈದ್ಯಕೀಯ ಶಿಕ್ಷಣ ನಿರ್ದೇಶನಲಾಯ ಬೆಂಗಳೂರಿನ ನಿರ್ದೇಶಕರು ಸುತ್ತೋಲೆಯೊಂದು ಹೊರಡಿಸಿದ್ದು, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದ ಆದೇಶಿಸಿದರು. ಅಲ್ಲದೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಜನೀಶ್ ಗೋಯಲ್ ಅವರು ಕೂಡ ನಿವೃತ್ತರಿಗೆ ಬಿಡುಗಡೆಗೊಳ್ಳಿಸುವಂತೆ ಆದೇಶ ಕೂಡ ಹೊರಡಿಸಿದ್ದಾರೆ. ಆದೇಶ ಹೊರಬಂದ ನಂತರ ಅದರ ಪಾಲನೇ ಕೂಡ ಆಗಬೇಕು ಎಂಬುವುದು ಸರ್ಕಾರಿ ನೌಕರರು ಕೂಡ ಒತ್ತಾಯಿಸುತ್ತಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…