Home ನಿಮ್ಮ ಜಿಲ್ಲೆ ಬೀದರ ಜನರು ಎಸೆದ ದೇವರ ಫೋಟೋ ಸಂಗ್ರಹಿಸಿದ ಯುವಕರು

ಜನರು ಎಸೆದ ದೇವರ ಫೋಟೋ ಸಂಗ್ರಹಿಸಿದ ಯುವಕರು

ಯುವ ಬ್ರಿಗೇಡ್ ಯುವಕರ ಸಮಾಜ ಕಾರ್ಯ

ಬೀದರ: ಕಳೆದ ಕೆಲ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಹುಮನಾಬಾದ ಪಟ್ಟಣದ ಯುವ ಬ್ರಿಗೇಡ್ ಯುವಕರು ಇದೀಗ ಮತ್ತೊಂದು ಸಮಾಜ ಕಾರ್ಯಮಾಡುವ ಮೂಲಕ ಜನರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.

ಪ್ರತಿಯೊಬ್ಬರು ದಿನ ನಿತ್ಯ ಭಕ್ತಿಯಿಂದ ಪೂಜೆಮಾಡುವ ದೇವರ ಚಿತ್ರಗಳು ಹಳೆಯದಾದ ನಂತರ ವಿವಿಧಡೆ ಎಸೆಯುತ್ತಿರುವುದು ಗಮನಿಸಿದ ಯುವಕರು (ಕಣ-ಕಣದಲ್ಲಿ ಶಿವ) ಎಂಬ ಶೀರ್ಷಿಕೆ ಅಡಿಯಲ್ಲಿ  ಪಟ್ಟಣದ ವಿವಿಧಡೆ ಎಸೆಯಲ್ಲಾದ ದೇವರ ಚಿತ್ರಗಳನ್ನು ಸಂಗ್ರಹಿಸಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಜನರು ಇಟ್ಟ ದೇವರ ಚಿತ್ರಗಳು ತೆಗೆದುಕೊಂಡು ಅವುಗಳು ಬಿಡಿಬಿಡಿಯಾಗಿ ಮಾಡಿ, ದೇವರ ಚಿತ್ರಗಳ ಗುಂಡಿಯಲ್ಲಿ ಮುಚ್ಚಿಹಾಕಿ ಅದರ ಮೇಲೆ ಅರಳಿ ಮರ ನೆಟ್ಟಿದ್ದಾರೆ.  ಕುರಿತು ಯುವಕರು ಹೇಳುವುದು ಹೀಗೆ, ಪ್ರತಿನಿತ್ಯ ಮನೆ ಹಾಗೂ ಅಂಗಡಿಗಳಲ್ಲಿ ದೇವರ ಚಿತ್ರಕ್ಕೆ ಪೂಜೆ ಮಾಡಲಾಗುತ್ತದೆ. ಅಲ್ಲದೆ, ವರ್ಷದ ಕ್ಯಾಲೇಂಡರನಲ್ಲಿ ಕೂಡ ದೇವರ ಚಿತ್ರಗಳು ಇದ್ದು, ದೀಪಾವಳಿ, ದಸರಾ ಸಂದರ್ಭದಲ್ಲಿ ಬದಲಾವಣೆ ಮಾಡುವ ವಾಡಿಕೆ ಈ ಭಾಗದಲ್ಲಿ ವಾಡಿಕೆಯಾಗಿದೆ. ಹಳೆ ಚಿತ್ರಗಳ ತಿಪ್ಪೆ ಗುಂಡ ಸೇರಿದಂತೆ ವಿವಿಧಡೆ ಎಸೆಯುವುದು ನೋವು ತಂದಿದ್ದು, ಎಲ್ಲಾ ಯುವಕರು ಬದಲಾವಣೆಗೆ ಬುನಾದಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲ ಈ ಕಾರ್ಯಮಾಡಲಾಗಿದೆ ಎಂದು ತಿಳಿಸಿದ್ದಾರೆ

ತಾಲೂಕಾ ಸಂಚಾಲಕ ಪ್ರಶಾಂತ ಶೇರಿಕಾರ, ಸಹ ಸಂಚಾಲಕ ಅಮೀತ್ ವರ್ಮಾ, ಕಾಶಿನಾಥ ರಾಂಪೂರೆ, ವಿಕ್ರಂ ಶಂಭುಶಂಕರ್, ರಂಜೀತ್ ಮೇತ್ರೆ, ಸುರೇಶ ನವಣೆ, ಬಾಲರಡ್ಡಿ ಯಾಚಾ,ಕರಬಸಪ್ಪಾ ಛತ್ರಿ,ವಿ ಶಾಲ ರಜಪೂತ, ಬಲರಾಮ್ ಪೋಲಿದಾನ್,  ಓಂಕಾರ ಮೇತ್ರೆ, ಪಾಂಡುರಂಗ ಮಾಳೆ, ಆನಂದ ಜಾಜಿ. ಅನೀಲರಡ್ಡಿ ವಾಂಜರಿ, ದಿಲೀಪ್ ಪಂಚಾಳ, ರಾಹುಲ ಭೈರಾಗಿ ಸೇರಿದಂತೆ ಇತರರು ಇದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…