ಚುನಾವಣೆ ಕುರಿತು ಜನರಿಗೆ ಅರಿವು ಮೂಡಿಸಿ: ಸಂಜೀವ ಕುಮಾರ್
![]()
ಚುನಾವಣೆ ಕುರಿತು ಜನರಿಗೆ ಅರಿವು ಮೂಡಿಸಿ: ಸಂಜೀವ ಕುಮಾರ್
ಹಾಸನ: ಚುನಾವಣಾ ಆಯೋಗವು ಆ.7 ರಂದು ಹೊಸ ಕಟ್ಟಲೆ ಬಿಡುಗಡೆ ಮಾಡಿದ್ದು, ಈ ಕಟ್ಟಲೆಯನ್ನು ಎಲ್ಲಾ ಅಧಿಕಾರಿಗಳು ಅರಿತುಕೊಂಡು ಜನರಿಗೆ ಚುನಾವಣೆ ಕುರಿತು ಮುಕ್ತವಾಗಿ ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು 2003ರ ಜನವರಿಯಲ್ಲಿ ಹುಟ್ಟಿದ ಮಕ್ಕಳು ಈ ಕಟ್ಟಲೆಯ ಬಗ್ಗೆ ಅರಿಯಬೇಕು ಏಕೆಂದರೆ 2021 ಜನವರಿ ಹೊತ್ತಿಗೆ ಅವರಿಗೆ 18 ವರ್ಷ ತುಂಬಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಿರುತ್ತಾರೆ ಹಾಗಾಗಿ 2021ರ ಚುನಾವಣೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು, ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಚುನಾವಣೆಯ ಕೊನೆಯ ಸಮಯದಲ್ಲಿ ಯಾವುದೇ ಮತಗಟ್ಟೆಯ ಬೇಡಿಕೆ ಬಂದರೆ ಅವುಗಳನ್ನು ತಿರಸ್ಕರಿಸಲಾಗುತ್ತದೆ ಹಾಗಾಗಿ ಯಾವುದಾದರು ಮತಗಟ್ಟೆಯ ಬೇಡಿಕೆ ಇದ್ದರೂ ಸಹ ನಿಗಧಿತ ಸಮಯದೊಳಗೆ ತರ್ಕಬದ್ದವಾಗಿ ನಡೆಯಬೇಕು ಹಾಗಾಗಿ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ಸೋಂಕಿನಿಂದ ಚುನಾವಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಯಶಸ್ವಿಯಾಗುವಂತೆ ಮಾಡಬೇಕು ಎಂದು ಸಂಜೀವ ಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೋವಿಡ್ ಕಾರಣದಿಂದಾಗಿ ಬಾಕಿ ಉಳಿದಿರುವ ಎಲ್ಲಾ ಚುನಾವಣೆಗಳನ್ನು 2021 ರಲ್ಲಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲಾಗುವುದಿಲ್ಲ ಹಾಗಾಗಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಹಾಗೂ ಚುನಾವಣೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಯೂ ತಮ್ಮ ಕೆಲಸವನ್ನು ನಿಲ್ಲಿಸುವಂತಿಲ್ಲ ಮತ್ತು ಕೋವಿಡ್ ಕಾರಣ ನೀಡುವಂತಿಲ್ಲ. ಜೊತೆಗೆ ಎಲ್ಲಾ ಚುನಾವಣೆಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು ಹಾಗೂ ಮತಗಟ್ಟೆಯ ಕರಡನ್ನು ನವೆಂಬರ್ 15 ರೊಳಗೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರು ನಿರ್ದೇಶಿಸಿದರು.
2021ರ ಚುನಾವಣೆಯು 2015ರ ಚುನಾವಣೆಯಂತೆಯೇ ನಡೆಯಬೇಕು. ಚುನಾವಣೆಯ ಪ್ರಚಾರ ನವೆಂಬರ್ 15 ರಿಂದ ಡಿಸೆಂಬರ್ 15ರವರೆಗೆ ನಡೆಯಲಿದೆ ಹಾಗಾಗಿ ಪ್ರಚಾರ ಕಾರ್ಯವು ಆಯಾ ಜಿಲ್ಲೆಗಳಿಗೆ ಸಂಬಂದಿಸುತ್ತದೆ ಹಾಗಾಗಿ ಯಾವುದೇ ಅಡೆತಡೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ ಪ್ರತಿವರ್ಷ ಜನವರಿ 15 ವಿಶೇಷ ಸಾರಾಂಶ ಪರಿಷ್ಕರಣೆಯನ್ನು ಹೊಂದಿದ್ದೇವೆ ಈ ಶಾಸನಬದ್ದ ಕರ್ತವ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಮತಗಟ್ಟೆಗಳು ಯಾವಾಗಲು ವಿವಾದಗಳ ವಿಷಯವಾಗಿರುತ್ತವೆ ಹಾಗಾಗಿ ಸಾರ್ವಜನಿಕರ ದೂರುಗಳು ಖಂಡಿತವಾಗಿಯೂ ಇರುತ್ತವೆ. ಕೆಲವರು ದೂರುಗಳನ್ನು ನೀಡಲು ಖಂಡಿತವಾಗಿಯೂ ಪ್ರೇರೇಪಿಸುತ್ತಾರೆ ಹಾಗಾಗಿ ತಾವುಗಳು ಅದನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆ ಒಂದು ಶಾಸನಬದ್ದ ಕರ್ತವ್ಯ ಹಾಗಾಗಿ ಅದಕ್ಕೆ ಒತ್ತು ನೀಡಬೇಕು. ರೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್ ಪ್ರಕಾರ ಎಲ್ಲರೂ ಚುನಾವಣಾ ಆಯೋಗದ ನಿಯಂತ್ರಣದಲ್ಲಿರುತ್ತಾರೆ ಹಾಗಾಗಿ ಯಾವುದೇ ವಿಷಯವು ತಪ್ಪಿ ಹೋದರೆ ಅದು ಗಂಭೀರವಾದ ತಿರುವು ಪಡೆಯುತ್ತದೆ ಹಾಗಾಗಿ ಎಲ್ಲಾ ಚುನಾವಣಾ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಅಪರ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮತಗಟ್ಟೆ ವಿಚಾರ ಮಂಡಿಸಲು ನಿಗಧಿತ ಸಮಯ ನೀಡಿದ್ದು, ಅದು ತರ್ಕಬದ್ದವಾಗಿ ನಡೆಯುತ್ತದೆ ಹಾಗಾಗಿ ಈ ವರ್ಷ ಇದನ್ನು ರಾಜಕೀಯ ಪಕ್ಷಗಳೊಂದಿಗೆ ಪ್ರಸ್ತಾಪಿಸಿ ಮತ್ತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದರಲ್ಲದೆ, ಯಾವುದೇ ಹೊಸ ಮತಗಟ್ಟೆ ಬೇಕೆಂದರೆ ಆ ವಿಷಯದ ಕುರಿತು ಚರ್ಚೆ ಮಾಡಿ ನಿರ್ಧರಿಸುವಂತೆ ಅಧಿಕಾರಿಗಳಿಗೆ ಅಪರ ಮುಖ್ಯ ಚುನಾವಣಾಧಿಕಾರಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಚುನಾವಣಾ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಹಾಜರಿದ್ದರು.
Date: 21-08-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















