Home ನಿಮ್ಮ ಜಿಲ್ಲೆ ಬೀದರ ಕೃಷಿ ಅಧಿಕಾರಿಗಳ ವರ್ಗಾವಣೆ ಆದೇಶ ಸರ್ಕಾರ ಹಿಂದೆ ಪಡೆಯಬೇಕು : ರೈತರ ಒತ್ತಾಯ

ಕೃಷಿ ಅಧಿಕಾರಿಗಳ ವರ್ಗಾವಣೆ ಆದೇಶ ಸರ್ಕಾರ ಹಿಂದೆ ಪಡೆಯಬೇಕು : ರೈತರ ಒತ್ತಾಯ

ಕೃಷಿ ಅಧಿಕಾರಿಗಳ ವರ್ಗಾವಣೆ ಆದೇಶ ಸರ್ಕಾರ ಹಿಂದೆ ಪಡೆಯಬೇಕು : ರೈತರ ಒತ್ತಾಯ


ಹುಮನಾಬಾದ: ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಜಿಲ್ಲೆಯ ಕೃಷಿ ಅಧಿಕಾರಿಗಳನ್ನು ಕಿರುಕುಳ ನೀಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಎರೆಡು ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಗುರಿಮಾಡಿ ಸರ್ಕಾರ ವರ್ಗಾವಣೆ ಅಸ್ತç ಬಳಸುವುದು ಎಷ್ಟು ಸರಿ? ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಬಾಯಿತೆರೆದು ಸತ್ಯ ಹೇಳೋದು ತಪ್ಪಾ ಎಂದು ಹುಮನಾಬಾದ ತಾಲೂಕಿನ ರೈತರು ಆಕ್ರೋಷ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆದಿದೆ.
ಕೃಷಿ ಅಧಿಕಾರಿಗಳ ಮಧ್ಯದ ಮುಸುಕಿನ ಗುದ್ದಾಟ ಹಿನ್ನೆಲೆಯಲ್ಲಿ ಸರ್ಕಾರ ಕೆಲ ಅಧಿಕಾರಿಗಳನ್ನು ವರ್ಗಾವಣೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹುಮನಾಬಾದ ತಾಲೂಕಿನ ರೈತರು, ಶಾಸಕರ ಕಚೇರಿ ಹತ್ತಿರ ಜಮಾಗೊಂಡು ಸಕಾರದ ನಡೆ ವಿರುದ್ದ ಅಸಮಾಧಾನ ವಯಕ್ತಪಡಿಸಿದರು.
ಅನ್ಯಾಯಕ್ಕೆ ಒಳಗಾದ ಕೃಷಿ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡುವ ಅಸ್ತç ಬಳಸುವ ನಿರ್ದಾರ ಸರಿಯಲ್ಲ ಕೂಡಲೇ ಸರ್ಕಾರ ಹೊರಡಿಸಿದ ಆದೇಶ ಹಿಂದೆ ಪಡೆಯುವಂತೆ ಕೃಷಿ ಸಚಿವರ ಮೇಲೆ ಒತ್ತಡ ಹೇರಬೇಕು ಎಂದು ತಾಲೂಕಿನ ರೈತರು ಶಾಸಕ ರಾಜಶೇಖರ ಪಾಟೀಲ ಅವರನ್ನು ಒತ್ತಾಯಿಸಿದರು.
ಹುಮನಾಬಾದ ತಾಲೂಕಿನಲ್ಲಿ ಕಳೆದ ಕೆಲ ವರ್ಷಗಳಿಂದ ಕೃಷಿ ಅಧಿಕಾರಿ ಡಾ| ಪಿಎಂ ಮಲ್ಲಿಕಾರ್ಜುನ ರೈತರ ಪರ ಕೆಲಸ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಕಚೇರಿಗೆ ಭೇಟಿನೀಡುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಗೆ ಸಲಹೆ ಸೂಚನೆಗಳು ನೀಡಿ ರೈತರ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯ ನಡೆಸಿದ್ದಾರೆ. ಕೂಡಲೇ ಕೃಷಿ ಸಚಿವರನ್ನು ಮಾತನಾಡಿ ವರ್ಗಾವಣೆ ಆದೇಶ ರದ್ದುಮಾಡಿ ಅಧಿಕಾರಿ ಕರ್ತವ್ಯ ಮುಂದು ವರೆಸುವಂತೆ ರೈತರು ಶಾಸಕರನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮನವಿ ಪತ್ರ ಕೂಡ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ, ಕೃಷಿ ಅಧಿಕಾರಿ ಡಾ| ಮಲ್ಲಿಕಾರ್ಜುನ ಪ್ರಾಮಾಣಿಕ ಹಾಗೂ ಕಾಯಕ ನಿಷ್ಠವ್ಯಕ್ತಿ. ರೈತರ ಸಮಸ್ಯೆಗಳ ಕುರಿತು ಯಾವುದು ದೂರುಗಳು ಬರದಂತೆ ಉತ್ತಮ ಕೆಲಸ ಮಾಡಿದ್ದಾರೆ. ಈಗಾಗಲೇ ಕೃಷಿ ಸಚಿವ ಬಿ.ಸಿ ಪಾಟೀಲ ಅವರನ್ನು ಮಾತನಾಡಿ ಅಧಿಕಾರಿ ಕರ್ತವ್ಯ ಮುಂದು ವರೆಸುವಂತೆ ಮನವರಿಕೆ ಮಾಡಲಾಗಿದೆ. ಇನ್ನೊಂದು ಬಾರಿ ಮಾತನಾಡಿ ಮತ್ತೆ ಪೂರ್ಣ ಮಾಹಿತಿ ನೀಡಿ. ವರ್ಗಾವಣೆ ರದ್ದು ಮಾಡುವಂತೆ ತಿಳಿಸಲಾಗುವುದು. ಅಲ್ಲದೆ ಜಿಲ್ಲಾ ಉಸ್ತುವಾರಿಗಳ ಜೊತೆ ಕೂಡ ಮಾತನಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರೆ ರೈತರು ಇದ್ದರು.


Date:26-06-2021  :

Main

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…