ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸುವೆ : ಸಚಿವ ರಮೇಶ ಜಾರಕಿಹೊಳಿ.
ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸುವೆ : ಸಚಿವ ರಮೇಶ ಜಾರಕಿಹೊಳಿ.
ಕಾರಂಜಾ ಜಲಾಶಯಕ್ಕೆ ಮಾಜ್ರಾ ನಂದಿ ನೀರು.
ಮೂರು ವರ್ಷದಲ್ಲಿ ಕಾರಂಜ ಕಾಮಗಾರಿ ಪೂರ್ಣ.
ಬೀದರ: ಕಾರಂಜ ಸಂತ್ರಸ್ತರು ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿನ ಸಂತ್ರಸ್ತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಜಮಾದಾರ್ ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತರ ಬೇಡಿಕೆಗಳು ಹಾಗೂ ಕಲ್ಪಿಸಬಹುದಾದ ಪರಿಹಾರಗಳ ಕುರಿತು ಜಮಾದಾರ್ ವರದಿ ಮುಂದಿನ ಕೆಲ ದಿನಗಳಲ್ಲಿ ಕೈ ಸೇರಲಿದ್ದು, ನಂತರ ಸರ್ಕಾರದಿಂದ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸರ್ಕಾರಗಳು ಬದಲಾದವು ಸಚಿವರು ಬದಲಾದರೂ ಆದರೂ ಕೂಡ ಈವರೆಗೆ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ತಿಂಗಳುಗಟ್ಟಲೆ ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಕೂಡ ಪರಿಹಾರ ಸಿಕ್ಕಿಲ್ಲ. ಈಗ ತಾವು ಯಾವ ರೀತಿ ಕ್ರಮವಹಿಸುತ್ತಿರಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು. ಜಮಾದಾರ್ ವರದಿ ಬಂದ ಕೂಡ ಸರ್ಕಾರ ಮಟ್ಟದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ತೆಗೆದುಕೊಳ್ಳಲಾಗುವುದು. ಮಧ್ಯವರ್ತಿಗಳು ದಳ್ಳಾಳಿಗಳು ಯಾರು ಈ ಮಧ್ಯೆ ಶಾಮಿಲ್ ಆಗದಂತೆ ನೋಡಿಕೊಳ್ಳಲಾಗುವುದು. ಅರ್ಹ ಹಾಗೂ ನೊಂದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಮತ್ತೊಮ್ಮೆ ಭರವಸೆ ನೀಡಿದರು.
ಕಾರಂಜಾ ಜಲಾಶಯಕ್ಕೆ ಮಾಜ್ರಾ ನಂದಿ ನೀರು.
ಕಳೆದ ಕೆಲವರ್ಷಗಳಿಂದ ಕಾತಂಜಾ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. 9 ಟಿಎಂಸಿ ಸಾಮರ್ಥ್ಯವುಳ್ಳ ಜಲಾಶಯಕ್ಕೆ ಕೇವಲ ಒಂದು ಒಂದುವರೆ ಟಿಎಂಸಿ ನೀರು ಹರಿದು ಬರುತ್ತಿದೆ. ಯಾವ ಕಾರಣಕ್ಕೆ ಹೀಗೆ ಎಂದು ಹಿಂದೇ ತಿರುಗಿ ನೋಡುವ ಬದಲಿಗೆ ಹೊಸ ರೂಪರೇಶಗಳು ಹಾಕಿಕೊಂಡು ಮಂಜ್ರಾ ನಂದಿಯಿಂದ ಪೈಪ್ ಲೈನ್ ವ್ಯವಸ್ಥೆ ಮಾಡಿ ನೀರು ಲಿಪ್ಟ್ ಮಾಡುವ ಕೆಲಸ ಮಾಡುವ ಯೋಚನೆ ಇದೆ. ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕೆಲಸ ಆರಂಭ ಆಗಲ್ಲಿದೆ ಎಂದ ಅವರು, ಜಿಲ್ಲೆಯಲ್ಲಿ ಕೆರೆ ಅಭಿವೃದ್ಧಿ ನೀರಾವರಿ ಯೋಜನೆಗಳಲ್ಲಿ ಅವ್ಯವಹಾರ ಅಥವಾ ಗುಣಮಟ್ಟದ ಕೆಲಸ ಕಂಡು ಬರದಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮೂರು ವರ್ಷದಲ್ಲಿ ಕಾರಂಜ ಕಾಮಗಾರಿ ಪೂರ್ಣ.
ದಶಕಗಳಿಂದ ನಡೆಯುತ್ತಿರುವ ಕಾರಂಜಾ ಜಲಾಶಯದ ಕಾಮಗಾರಿ ಮುಂದಿನ ಮೂರು ವರ್ಷದಲ್ಲಿ ಸಂಪೂರ್ಣ ಪೂರ್ಣಗೊಳಿಸಲಾಗುವುದು. ಮುಂದಿನ ಮೂರು ವರ್ಷದಲ್ಲಿ ಕಾರಂಜಾ ಜಲಾಶಯದ ಉದ್ದೇಶ ಈಡೇರಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾಜಿ ಶಾಸಕ ಸುಭಾಷ್ ಕಲ್ಲೂರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಠಾಳಕರ್, ಬಸವರಾಜ ಆರ್ಯ, ಮಲ್ಲಿಕಾರ್ಜುನ ಪ್ರಭಾ, ನಾಗೇಶ ಕಲ್ಲೂರ್, ವಿ.ಮಂಡಾ, ಮಲ್ಲಿಕಾರ್ಜುನಖುಂಬಾರ, ರಮೇಶ ಕಲ್ಲೂರ, ಹೊಸಳ್ಳಿ, ಗಜೆಂದ್ರ ಕನಕಟ್ಟಕರ್,ವಿಜಯಕುಮಾರ ದುರ್ಗದ ಸೇರಿದಂತೆ ಅನೇಕರು ಇದ್ದರು.
Date: 03-07-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















