ಕಾನೂನು ಉಲ್ಲಂಘನೆ ಅಂಗಡಿಗಳಿಗೆ ಬೀಗ
ಹುಮನಾಬಾದ: ಲಾಕ್ ಡೌನ್ ಉಲ್ಲಂಘನೆ ಮಾಡಿದ ಪಟ್ಟಣದ ವಿವಿಧ ಅಂಗಡಿಗಳನ್ನು ತಹಶೀಲ್ದಾರ ಹಾಗೂ ಸಿಪಿಐ ನೇತೃತ್ವದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗಿತ್ತು.
ಅಗತ್ಯ ವಸ್ತುಗಳ ಅಂಗಡಿಗಳು ಹೊರತುಪಡಿಸಿ ಇತರೆ ಅಂಗಡಿಗಳು ತೆರೆದಿರುವುದನ್ನು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದರು. ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಯಾವುದೇ ಅಂಗಡಿ ಇಳಿಯುವಂತಿಲ್ಲ. ಅಂಗಡಿಗಳ ಬಾಗಿಲು ತೆರೆದಿದ್ದರೆ,ಅಧಿಕಾರಿಗಳು ಹಾಕಿದ ಸೀಲ್ ಓಪನ್ ಮಾಡಿದರೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಪಟ್ಟಣದ ಸುಮಾರು 50ಕ್ಕೂ ಅಧಿಕ ಅಂಗಡಿಗಳಿಗೆ ಸೀಲ್ ಹಾಕಲಾಯಿತು. ಮಾರುಕಟ್ಟೆಯಲ್ಲಿ ಯಾವುದೇ ಜನದಟ್ಟಣೆ ಕಂಡು ಬರಬಾರದು. ಅಂಗಡಿಗಳ ಎದುರಿಗೆ ಜನರು ಕಂಡು ಬರಬಾರದು ಪ್ರತಿಯೊಬ್ಬರು ಲಾಕ್ ಡೌನ್ ಕಾನೂನು ಪಾಲಿಸಬೇಕು ಎಂದು ತಿಳಿಸಿದರು.
Date: 20-04-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…