Home ನಿಮ್ಮ ಜಿಲ್ಲೆ ಬೀದರ ಕಲ್ಲೂರ್ ಕೋರ್ ಕಮಿಟಿಯಿಂದ ದೂರ.

ಕಲ್ಲೂರ್ ಕೋರ್ ಕಮಿಟಿಯಿಂದ ದೂರ.

ಕಲ್ಲೂರ್ ಕೋರ್ ಕಮಿಟಿಯಿಂದ ದೂರ.

ಬೀದರ: ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಮಾಜಿ ಶಾಸಕ ಸುಭಾಷ ಕಲ್ಲೂರ್ ಇದೀಗ ರಾಜಕೀಯ ಷಡ್ಯಂತ್ರದಿಂದ ಕೋರ್ ಕಮಿಟಿ ಸಭೆಯಿಂದ ದೂರ ಉಳಿಯುವಂತಾಗಿದೆ ಎಂದು ಕಲ್ಲೂರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಗಸ್ಟ್ 28 ರಂದು ಹುಮನಾಬಾದ್ ತಾಲೂಕಿನ ಮಾಣಿಕನಗರದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿದ್ದು ಈ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಕಲ್ಲೂರ್ ಅವರನ್ನು ಆಹ್ವಾನಿಸಿಲ್ಲ. ಇಷ್ಟು ವರ್ಷಗಳ ಕಾಲ ಕೋರ್ ಕಮಿಟಿ ಸಭೆಯಲ್ಲಿ ಇದ್ದ ಮಾಜಿ ಶಾಸಕ ಸುಭಾಷ್ ಕಲ್ಲೂರ್ ಅವರನ್ನು ಉದ್ದೇಶಪೂರ್ವಕವಾಗಿ ಪ್ರಥಮ ಬಾರಿಗೆ ಕೋರ್ ಕಮಿಟಿ ಸಭೆಯಿಂದ ದೂರ ಉಳಿಯುವಂತೆ ಮಾಡಿದ್ದಾರೆ. ಇವತ್ತು ಪಕ್ಷದಲ್ಲಿ ಬೆಳೆದ ಅನೇಕರು ಅವರಿಂದಲೇ ಮೇಲೆ ಬಂದಿದ್ದಾರೆ ಎಂಬುದು ಮುಖಂಡರು ಮರೆತಿದ್ದಾರೆ  ಎಂದು ಅನೇಕ ಬಿಜೆಪಿ ಮುಖಂಡರ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಮಾಜಿ ಶಾಸಕ ಸುಭಾಷ್ ಕಲ್ಲೂರ್ ಅವರನ್ನು ವಿಚಾರಿಸಿದ್ದಾಗ, ಕೋರ್ ಕಮಿಟಿ ಸಭೆಗೆ ಯಾರು ಕರೆದಿಲ್ಲ. ಇಷ್ಟು ವರ್ಷ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಅನೇಕರನ್ನು ಗುರುತಿಸಿ ಸ್ಥಾನಮಾನ ನೀಡಿ ಬೆಳೆಸುವ ಕಾರ್ಯ ಮಾಡಿದ್ದೇನೆ. ಆದರೆ ಇದೀಗ ಪಕ್ಷದಲ್ಲಿ ಏನು ನಡೆದಿದೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಮೊಬೈಲ್ ಮೂಲಕ ರಾಜ್ಯಾಧ್ಯಕ್ಷರಿಗೆ ಕರೆಮಾಡಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

 

Date: 29-08-2020   www.kknewsonline.i

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…