Home ನಿಮ್ಮ ಜಿಲ್ಲೆ ಬೀದರ ಉದ್ಯಮಕ್ಕೆ ರಜಂತಲ್ ಕುಟುಂಬ ಹೆಸರುವಾಸಿ

ಉದ್ಯಮಕ್ಕೆ ರಜಂತಲ್ ಕುಟುಂಬ ಹೆಸರುವಾಸಿ

ಬೀದರ: ಉದ್ಯಮ ಕ್ಷೇತ್ರಕ್ಕೆ ಇಲ್ಲಿನ ರಜಂತಲ್ ಕುಟುಂಬ ಹೆಸರುವಾಸಿಯಾಗಿದ್ದು, ರಜಂತಲ್ ಗಣೇಶನ ಸೇವೆ ಇದಕ್ಕೆ ಕಾರಣ ಎಂದು ವೈರಾಗಿ ಶಾಖಾಮಠದ  ಅವಧೋತಗೀರಿ ಮಹಾರಾಜ ಹೇಳಿದರು.
ಬೀದರ್ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ವಾಸು ಪೆಟ್ರೋಲಿಯಂ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಆಡು ಮುಟ್ಟದ ಸೊಪ್ಪು ಇಲ್ಲ ಹಾಗೇ ರಜಂತಲ್ ಕುಟುಂಬ ಮಾಡದ ಉದ್ಯಮ ಇಲ್ಲ ಎಂದ ಶ್ರೀಗಳು, ದೇವರ ಸೇವೆ ಮಾಡುವರಿಗೆ ದೇವರು ಒಳ್ಳೆಯದೇ ಮಾಡುತ್ತಾನೆ. ಉದ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಂತಾಗಲ್ಲಿ. ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಎಂಬುವುದು ಪ್ರತಿಯೊಬ್ಬರು ತಿಳಿದುಕೊಂಡು ಜೀವನ ಸಾಗಿಸಬೇಕು. ಯಾವುದೇ ಉದ್ಯಮ ಒಂದೇ ದಿನದಲ್ಲಿ ಬೆಳೆದು ಫಲ ನೀಡುವುದಿಲ್ಲ. ಅದಕ್ಕೆ ಅನುಗುಣವಾಗಿ ಶ್ರಮಿಸಬೇಕು. ಆಗ ಮಾತ್ರ ಅದಕ್ಕೆ ಫಲ ದೊರೆಯುತ್ತದೆ ಎಂದು ಸಲಹೆ ನೀಡಿದರು.
 ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ವಾಸು ಪೇಟ್ರೊಲಿಯಂ ಮಾಲೀಕ ಶ್ರೀನಿವಾ ರಜಂತಲ್, ವಾಣಿಜ್ಯ ಮಂಡಳಿ ಅಧ್ಯಕ್ಷ  ಬಿ.ಜಿ ಶಟ್ಟಗಾರ, ಸಂಗಯ್ಯಾ ರಜಂತಲ್, ಅಶೋಕ ರಜಂತಲ್, ಡಾ। ಸಂತೋಷ ರಜಂತಲ್, ರಾಘವೇಂದ್ರ ರಜಂತಲ್,
ಪ್ರಶಾಂತ ರಜಾಂತಲ್ಲ, ನಂದ ಕುಮಾರ ಚಿದ್ರಿ ಸೇರಿದಂತೆ ಅನೇಕರು ಇದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…