ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾಣ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾಣ
(ದುರ್ಯೋಧನ ಹೂಗಾರ)
ಹುಮನಾಬಾದ: ಕುಲದೇವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಯವ ನಿಮಿತ್ಯ ನಡೆಯಬೇಕಿದ್ದ ಪೂರ್ವಭಾವಿ ಸಿದ್ಧತಾ ಸಭೆ ಗೊಂದಲಕ್ಕೆ ಈಡಾಗಿ ದಿನಗಳು ಕಳೆಯುತ್ತಿರುವ ಮಧ್ಯದಲ್ಲಿಯೇ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಕೂಡ ಮತ್ತೆ ಗೊಂದಲ ಸೃಷ್ಟಿಸುವಂತೆ ಮಾಡಿದೆ.
ಮುಜುರಾಯಿ ಇಲಾಖೆಗೆ ಒಳಪಡುವ ಈ ದೇವಸ್ಥಾನದಲ್ಲಿ ಪ್ರತಿವರ್ಷ ಜನವರಿ 10 ರಿಂದ ಜನವರಿ 26ರ ವರೆಗೆ ಜಾತ್ರಾ ಮಹೋತ್ಸ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಡಿಸೆಂಬರ್ ಅಂತ್ಯದಲ್ಲಿಯೇ ಪೂರ್ವಭಾವಿ ಸಭೆ ನಡೆಯುತ್ತಿತ್ತು. ಆದರೆ, ಈ ವರ್ಷ ಸ್ಥಳೀಯ ರಾಜಕೀಯ ಗುದ್ದಾಟಕ್ಕೆ ಇಂದಿಗೂ ಕೂಡ ಪೂರ್ವಭಾವಿ ಸಭೆ ನಡೆಯದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಧ್ಯ ಜಾತ್ರೆಯ ಸಭೆಯ ಅಧ್ಯಕ್ಷೆತೆ ಕುರಿತು ಗೊಂದಲ ನಿರ್ಮಾಣವಾಗಿದ್ದು, ದೇವಸ್ಥಾನ ಆಡಳಿತಾಧಿಕಾರಿ ಬಸವಕಲ್ಯಾಣ ಸಹಾಯಕ ಆಯುಕ್ತರಿಗೂ ಕೂಡ ಗೊಂದಲ ಸೃಷ್ಟಿಯಾಗಿರುವ ಕಾರಣ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು ಸೂಕ್ತ ಮಾರ್ಗದರ್ಶನ ನಿಡುವಂತೆ ಪತ್ರ ಬರೆದಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ನೇತೃತ್ವದಲ್ಲಿ, ಅಧ್ಯಕ್ಷತೆಯಲ್ಲಿಯೇ ಜಾತ್ರೆಯ ಎಲ್ಲಾ ಸಭೆ, ಸಮಾರಂಭಗಳು ನಡೆಯುತ್ತಿದ್ದವು. ಅಲ್ಲದೆ, ನೂತನವಾಗಿ ಶಾಸಕರಾಗಿ ಆಯ್ಕೆಗೊಂಡಿರುವ ಡಾ| ಸಿದ್ದಲಿಂಗಪ್ಪ ಪಾಟೀಲ ಅವರ ಅಧ್ಯಕ್ಷತೆಯಲ್ಲಿಯೇ ಜಾತ್ರೆಯ ಪೂರ್ವಭಾಗಿ ಸಭೆ ನಡೆಸಲು ದಿನಾಂಕ 22-12-2023ರಂದು ದಿನ ನಿಗದಿಮಾಡಿ ಸಭೆ ಕರೆಯಲಾಗಿತ್ತು. ಆದರೆ, ಮಾಜಿ ಪುರಸಭೆ ಸದಸ್ಯ ಮಹೇಶ ಅಗಡಿ ಬಸವಕಲ್ಯಾಣ ಆಯುಕ್ತರಿಗೆ ಪತ್ರ ಬರೆದು ಶಾಸಕರ ಬದಲಿಗೆ ನಿಯಮ ಅನುಸಾರವಾಗಿ ಸಭೆಯ ಅಧ್ಯಕ್ಷರನ್ನು ನೇಮಕಮಾಡಿ ಸಭೆ ನಡೆಸುವಂತೆ ಆಕ್ಷೇಪಣೆ ಸಲ್ಲಿಸಿದ ಕಾರಣಕ್ಕೆ ಸಭೆಯನ್ನು ರದ್ದುಮಾಡಿ ಮುಂದೊಡಲಾಗಿತ್ತು. ಇಂದಿಗೂ ಕೂಡ ಅಧಿಕಾರಿಗಳು ಸೂಕ್ತ ನಿರ್ಧಾರಗಳು ತೆಗೆದುಕೊಂಡು ಜಾತ್ರಾ ಮಹೋತ್ಸವದ ಸಭೆ ನಡೆಸಲು ವಿಫಲರಾಗಿದ್ದಾರೆ. ಇಲ್ಲಿನ ರಾಜಕೀಯ ಗುದ್ದಾಟಕ್ಕೆ ಅಧಿಕಾರಿಗಳು ದಿನಕಳೆಯುತ್ತಿದ್ದಾರೆ ಎಂದು ಪಟ್ಟಣದ ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಪತಪತ್ರದಲ್ಲಿ ಏನಿದೆ: ಶಾಸಕ ಡಾ| ಸಿದ್ದಲಿಂಗಪ್ಪ ಪಾಟೀಲ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಾದಾಯ ದತ್ತಿಗಳ ಇಲಾಖೆಗೆ ಪತ್ರ ಬರೆದಿದ್ದು, ಇದಕ್ಕೆ ಉತ್ತರಿಸಿದ ಇಲಾಖೆಯ ಆಯುಕ್ತರು ಈ ಹಿಂದಿನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಡೆಸಿಕೊಂಡು ಬಂದ0ತೆ ಈ ವರ್ಷವೂ ಸಹ ಅದನ್ನೇ ಮುಂದುವರೆಸಲು ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಪತ್ರ ರವಾನೆ ಮಾಡಿದ್ದಾರೆ.
ಜನರ ಅಭಿಪ್ರಾಯ: ವೀರಭದ್ರೇಶ್ವರ ದೇವಸ್ಥಾನ ಅಥವಾ ಜಾತ್ರಾ ಮಹೋತ್ಸವದಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ. ಯಾರೇ ಇದ್ದರೂ ಕೂಡ ದೇವರ ಭಕ್ತರಾಗಿ ಸೇವೆಗೆ ಮಾತ್ರ ಮುಂದಾಗಬೇಕು. ಇಲ್ಲಿ ವೈಯಕ್ತಿಕ ಪ್ರತಿಷ್ಠೆಗೆ ಯಾರು ಕೂಡ ಮುಂದಾಗಬಾರದು. ಪಟ್ಟಣದಲ್ಲಿನ ಜನರು ದೇವರ ಭಕ್ತರಾಗಿದ್ದು, ಭಕ್ತಿಭಾವದಿಂದ ಎಲ್ಲರೂ ಸೇರಿ ಅದ್ದೂರಿ ಜಾತ್ರೆಗೆ ಮುಂದಾಗಬೇಕು. ಅಲ್ಲದೆ, ಹಿರೇಮಠ ಸ್ವಾಮಿಗಳು ಕೂಡ ಇದಕ್ಕೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಮಾಡಬೇಕು. ರಂಭಾಪೂರಿ ಶ್ರೀಗಳು ಕೂಡ ಸಂಬ0ಧಿಸಿದವರಿಗೆ ಮಾತನಾಡಿ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತರಾಗಬೇಕು ಎಂದು ಪಟ್ಟಣದ ಜನರು, ವೀರಭದ್ರನ ಭಕ್ತರು ಅಭಿಪ್ರಾಯವಾಗಿದೆ.
ಕಳೆದ ಕೆಲ ದಿನಗಳ ಹಿಂದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಜೆಜೆಂ ಕಾಮಗಾರಿ ಚಾಲನೆಯಲ್ಲಿ ಶಿಷ್ಠಾಚಾರ ವಿಷಯಕ್ಕೆ ರಾಜಕೀಯ ಜಗಳ ನಡೆದಿದ್ದು, ಇದೀಗ ವೀರಭದ್ರೇಶ್ವರ ಜಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅಂತಹ ಘಟನೆ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಇಲ್ಲಿನ ಪೊಲೀಸ್ ಅಧಿಕಾರಿಗಳು ಕೂಡ ಜಾಗೃತೆ ವಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಕೂಡಲೇ ಸೂಕ್ತ ನಿರ್ಧಾರಗಳು ತೆಗೆದುಕೊಂಡು ಸಭೆ ನಡೆಸುವ ಮೂಲಕ ಶಾಂತಿಯುತ ಹಾಗೂ ಅದ್ದೂರಿ ಜಾತ್ರೆಗೆ ಮುಂದಾಗಬೇಕಿದೆ.
Date: 31-12-2023 : Time: 14:45pm
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















