ಬೀದರ
ಗರ್ಭಪಾತ ಮಾತ್ರೆಗಳ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ: ಡಿಸಿ
ಬೀದರ: ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಜ.13ರಂದು ಬ್ರಿಮ್ಸ್ ಕಾಲೇಜಿನಲ್ಲಿ ಔಷಧ ಅಂಗಡಿ ಹಾಗೂ ಡಿಸ್ಟಿçÃಬ್ಯೂಟರ್ ಮಾಲೀಕರ ಸಭೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕುಂದುತ್ತಿರುವ ಲಿಂಗಾನುಪಾತದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗರ್ಭಪಾತದ ಮಾತ್ರೆಗಳ ದುರುಪಯೋಗ ನಿಲ್ಲಿಸಲು ಎಲ್ಲ ಔಷಧಿ ಅಂಗಡಿಯವರು ಕೈಜೋಡಿಸಬೇಕು ಎಂದು ಸೂಚಿಸಿದರು. ಮತ್ತು ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜನರು ನೇರವಾಗಿ ಅಂಗಡಿಗಳಲ್ಲಿ ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಂಡು ಅನಾಹುತಕ್ಕೆ…
Read More »ಬೀದರ್ನಲ್ಲಿ ರಾಜ್ಯಮಟ್ಟದ ಪಶುಮೇಳ: ಸಿದ್ಧತೆಗೆ ಸಚಿವರ ಸೂಚನೆ
ಬೀದರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಫೆಬ್ರವರಿ 7ರಿಂದ 9ರವರೆಗೆ ರಾಜ್ಯಮಟ್ಟದ ಪಶುಮೇಳವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪಶುಸಂಗೋಪನೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ.ಚವ್ಹಾಣ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜ.13ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ನಡೆಯುವ ಸ್ಥಳದ ಕುರಿತು…
Read More »ಬೀದರ-ಎಸ್ಬಿಐ ಸಾಲ ಮೇಳಕ್ಕೆ ಚಾಲನೆ
ಬೀದರ: ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ನಗರದ ಅಂಬೇಡ್ಕರ್ ವೃತದ ಬಳಿಯಿರುವ ಎಸ್ಬಿಐ ಶಾಖೆಯ ಆವರಣದಲ್ಲಿ ಜ.10ರಂದು ಹೋಮ್ ಲೋನ್ ಮೇಳಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಡಾ.ಸಿ.ವಿ ರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಎಸ್ಬಿಐನಿಂದ ಸಾರ್ವಜನಿಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮನೆ ನಿರ್ಮಾಣ ಮತ್ತು ನಿವೇಶನ ಖರೀದಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ…
Read More »ಸ್ಥಳದಲ್ಲೇ 20 ಅರ್ಜಿಗಳಿಗೆ ಪರಿಹಾರ ಕಲ್ಪಿಸಿದ ಎಸಿ..
ಬೀದರ: ಬೀದರ ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ್ ಅವರು ಜ.8ರಂದು ಠಾಣಾಕುಶನೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಅರ್ಜಿಗಳ ಪರಿಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 27 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದರಲ್ಲಿ ಪಿಂಚಣಿಗೆ ಸಂಬAಧಿಸಿದAತೆ ಸ್ವೀಕರಿಸಲಾದ 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಮರಣ ಪ್ರಮಾಣ ಪತ್ರ ಜಾರಿ ಆಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡಾಗ, ಕೂಡಲೇ ನೋಂದಣಿಯಾದ ಮರಣ ಪ್ರಮಾಣ ಪತ್ರವನ್ನು ವಿತರಿಸಲಾಯಿತು.…
Read More »ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
ಬೀದರ: ಜಿಲ್ಲಾಡಳಿತದಿಂದ ಜ.8ರವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಜ.6ರಂದು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಟ್ಟಿಯಿಂದ ಬಿಟ್ಟು ಹೋದವರನ್ನು ಸೇರಿಸುವ ನಿಟ್ಟಿನಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಏರ್ಪಡಿಸಲಾಗಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಹಾಗೂ ಮತದಾನಕ್ಕೆ ಅರ್ಹತೆ ಹೊಂದಿದ…
Read More »ವೀರಶೈವ ಸಕಲ ಮನುಕುಲಕ್ಕೆ ಲೇಸನ್ನೇ ಬಯಸುತ್ತದೆ.
ಬೀದರ: ಪ್ರಪಂಚದಲ್ಲಿ ಹಲವು ಧರ್ಮಗಳು ತಮ್ಮ ತಮ್ಮ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುತ್ತಾರೆ. ಆದರೆ, ವೀರಶೈವ ಧರ್ಮ ಮಾತ್ರ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುವ ಮೂಲಕ ಮಾನವ ಧರ್ಮಕ್ಕೆ ಪ್ರಾತಿನಿಧ್ಯ ನೀಡುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಭಗವತ್ಪಾದರ ತಿಳಿಸಿದರು. ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಅವರು ಆರ್ಶೀವಚನ ನೀಡಿದರು. ಧರ್ಮದಲ್ಲಿ ರಾಜಕೀಯ ಬರಬಾರದು.…
Read More »ಹುಮನಾಬಾದ- ಹಲವೆಡೆ ವಿದ್ಯುತ್ ವ್ಯತ್ಯಯ
ಬೀದರ: ಹುಮನಾಬಾದ ಪಟ್ಟಣದಲ್ಲಿ ಜರುಗುವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವ ಸಿದ್ಧತೆ ವಿದ್ಯತ್ ನಿರ್ವಹಣೆ ಕಾಮಗಾರಿ ನಡೆಯುವ ಪ್ರಯುಕ್ತ ಜ.3ರಿಂದ 11ರವರೆಗೆ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ. ಜ.3ರಂದು ಶಿವಪುರ ಗಲ್ಲಿ, ಸನಾ ಕಾಲೋನಿ, ಶಿವಾಜಿ ಚೌಕ್, ಬಾಲಾಜಿ ಮಂದಿರ, ಎಂಪಿ ಗಲ್ಲಿ, ವೀರಭದ್ರೇಶ್ವರ ದೇವಸ್ಥಾನ, ಹಳೆ ಮುನ್ಸಿಪಾಲಿಟಿ, ಪಕಿರ್ಟ್ಟಿಕಡಾ, ಶಿವಪುರ್ಬೇಸ್, ತೋಪ್ ಗಲ್ಲಿ. ಜ.6ರಂದು ಜೆರಪೇಟ್, ತಹಸೀಲ್ ಕಚೇರಿ, ಬಸ್ನಿಲ್ದಾಣ,…
Read More »ಬೆಂಗಳೂರು ಭಾಗದ ಶಿಕ್ಷಣ ಬೀದರನಲ್ಲಿ ಲಭ್ಯ.
ಬೀದರ: ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಹಾಗೂ ಪಿ.ಯು ಗುಣಮಟ್ಟದ ಫಲಿತಾಂಶ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಮಾತೆ ಮಾಣಿಕೇಶ್ವರಿ ಪಿ.ಯು ಕಾಲೇಜು ಹಾಗೂ ಬೆಂಗಳೂರಿನ ಟೋಮಿಕ್ ಅಕಾಡೆಮಿ ಸಹಯೋಗದಲ್ಲಿ ತರಬೇತಿಗಳು ನಡೆಯಲ್ಲಿವೆ ಎಂದು ಮಾತೆ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಕುಲರ್ಣಿ ತಿಳಿಸಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಕರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಿಂದ ಮಾತೆ ಮಾಣಿಕೇಶ್ವರ ಸಂಸ್ಥೆ…
Read More »ದಲ್ಲಾಳ್ಳಿಗಳು ಕಂಡುಬಂದಲ್ಲಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ಸಚಿವ.
ಬೀದರ: ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಡಿ.31 ಮಂಗಳವಾರ ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಬ್ರೋಕರ್ಗಳು ಕಂಡುಬಂದಲ್ಲಿ ನಾನೇ ಖುದ್ದು ಕಚೇರಿಯನ್ನು ಬಂದ್ ಮಾಡಿಸುತ್ತೇನೆ ಎಂದು ಸಚಿವ ಪ್ರಭು ಚವ್ಹಾಣ್ ಆರ್ಟಿಓ ಅಧಿಕಾರಿಗೆ ಎಚ್ಚರಿಸಿದ ಘಟನೆ ನಡೆಸಿದೆ. ಆರ್ಟಿಓ ಕಚೇರಿ ಎಂದರೆ ಬ್ರೋಕರ್ ಮಾಫಿಯಾ ಅನ್ನುವಂತ ಕೆಟ್ಟ ಹೆಸರಾಗುತ್ತಿದೆ. ಇದು ಹೋಗಬೇಕು. ಇನ್ನುಮುಂದೆ ಈ ಕಚೇರಿಯಲ್ಲಿ ಬ್ರೋಕರ್ಗಳು ಕಂಡುಬಂದಲ್ಲಿ ನಾನೇ ಖುದ್ದು…
Read More »ಹುಮನಾಬಾದ-12 ವರ್ಷ ಬಾಲಕನ ಕೊಲೆ..?
ಹುಮನಾಬಾದ: ಪಟ್ಟಣ ಹೊರವಲಯದ ಆಶ್ರಯ ಬಡಾವಣೆಯಲ್ಲಿ 12 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಪಟ್ಟಣದ ಶಾದಾನ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ ಶೇಖ್ ಜಾಸೀಮ್ ಇಬ್ರಾಹಿಂ (12) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಡಿ.25 ಬುಧವಾರ ಬಾಲಕನನ್ನು ಪಾಳುಬಿದ್ದ ಮನೆಯೊಂದರಲ್ಲಿ ಕರೆದುಕೊಂಡು ಹೋಗಿ ದುಷ್ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು…
Read More »


















