ಬೀದರ
ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಶಾಸಕ ಪಾಟೀಲರಿಂದ ಉಚಿತ ಮಾಸ್ಕ್.
ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಹೆದರಿಕೆ ಬೇಡ ಜಾಗೃತಿ ವಹಿಸಿ-ಶಾಸಕ ಪಾಟೀಲ ಸಲಹೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಶಾಸಕ ಪಾಟೀಲರಿಂದ ಉಚಿತ ಮಾಸ್ಕ್. ಹುಮನಾಬಾದ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಮತ್ತು ಪಾಲಕರು ಹೆದರಬಾರದು ಆದರೆ, ಜಾಗ್ರತೆವಹಿಸಿ ಪರೀಕ್ಷೆ ಬರೆಯಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದ್ದಾರೆ. ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಪರೀಕ್ಷಾ ಕೇಂದ್ರ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು…
Read More »ಹೊಸ ತಾ.ಪಂ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪ್ರಕಟ.
ಹೊಸ ತಾಲೂಕುಗಳ ತಾ.ಪಂ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪ್ರಕಟ. ಬೀದರ: ಜಿಲ್ಲೆಯ ಮೂರು ಹೊಸ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾದ ತಾಲೂಕು ಪಂಚಾಯತಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿ ಮೂರು ತಾಲೂಕು ಪಂಚಾಯತಗಳಿಗೆ ಮೀಸಲಾತಿ ಪ್ರಕಟಿಸಿದೆ. 14-10-2019ರಂದು ಹೊಸದಾಗಿ ರಚನೆಯಾಗಿರುವ ತಾಲೂಕುಗಳಾದ ಕಮಲನಗರ, ಚಿಟಗುಪ್ಪ ಹಾಗೂ ಹುಲಸೂರ ತಾಲೂಕುಗಳ ತಾ.ಪಂಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಕಮಲನಗರ ತಾಲೂಕು ಪಂಚಾಯಷತಿಯ ಅಧ್ಯಕ್ಷ ಸ್ಥಾನಕ್ಕೆ…
Read More »ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರ ಆರ್ ದಿಢೀರನೆ ಭೇಟಿ.
ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ದಿಢೀರನೆ ಭೇಟಿ. ತಾಲೂಕು ಮಟ್ಟದಲ್ಲಿ ಕೋವಿಡ್ ಆಸ್ಪತ್ರೆ ಚಿಂತನೆ – ಆಸ್ಪತ್ರೆಗಳ ವ್ಯವಸ್ಥೆ ಕುರಿತು ಪರಿಶೀಲನೆ. ಬೀದರ: ಜಿಲ್ಲೆಯಲ್ಲಿ ಕೋರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ನಗರದ ಬ್ರಿಮ್ಸ್ ಆಸ್ಪತ್ರೆ ಹಾಗೂ ಹುಮನಾಬಾದ ತಾಲೂಕು ಆಸ್ಪತ್ರೆಗೆ ಹಠಾತ್ತನೆ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಬಳಕೆ ಆಗದ ಕೊಠಡಿಗಳು, ಬೇಡ್ ಗಳ ವ್ಯವಸ್ಥೆಗಳು, ಐಸಿಯು ಘಟಕದಲ್ಲಿನ ವ್ಯವಸ್ಥೆ ಹಾಗೂ ವೆಂಟಲೇಟರ್…
Read More »ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಅಂತೆ ಕಾಮಗಾರಿ..?
ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಅಂತೆ ಕಾಮಗಾರಿ..? ಹುಮನಾಬಾದ: ಪಟ್ಟಣದ ಕಲ್ಲೂರ್ ರಸ್ತೆಯಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆಯ ಕಾಮಗಾರಿ ಕ್ರೀಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕಲ್ಲೂರ್ ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಫುಟ್ ಪಾತ್ ಕಾಮಗಾರಿ ನಡೆಯುತ್ತಿದ್ದು, ಕ್ರೀಯಾ ಯೋಜನೆ ಪ್ರಕಾರ ಕೆಲಸ ನಡೆಯುತ್ತಿಲ್ಲ. ಚರಂಡಿ ಕಾಮಗಾರಿಗೆ ಗಿಲಾವ ಮಾಡಬೇಕು ಎಂಬ ನಿಯಮ ಇದ್ದರೂ ಕೂಡ ಗಿಲಾವ ಮಾಡದೆ ಕಾಮಗಾರಿ ಮಾಡಲಾಗುತ್ತಿದೆ ಎಂಬ ಆರೋಪಗಳು…
Read More »ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..!
ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..! 50ಕ್ಕೂ ಅಧಿಕ ಪ್ರಕರಣ – 4 ಜನರ ಸಾವು – ಸೀಲ್ ಡೌನ್ ಅಗತ್ಯವೇ? -ದುರ್ಯೋಧನ ಹೂಗಾರ- ಬೀದರ: ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ ಪಟ್ಟಣದಲ್ಲಿ ಕೋವಿಡ್-19 ಸೋಂಕಿನ ಹಾವಳಿ ಹೆಚ್ಚಾಗಿದ್ದು, ಪಟ್ಟಣದ ಜನ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಟ್ಟಣದಲ್ಲಿ ಸೀಲ್ ಡೌನ್ ಮಾಡುವ ಅಗತ್ಯ ಇದೆ ಎಂದು ಇಲ್ಲಿನ ಜನರು ಚರ್ಚೆ ನಡೆಸಿದ್ದಾರೆ. ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ…
Read More »ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಮಾಡಿಕೊಳಿ-ಸಚಿ ವಚವ್ಹಾಣ್
ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಮಾಡಿಕೊಳಿ-ಸಚಿ ವಚವ್ಹಾಣ್ ಬೀದರಃ ಪ್ರತಿ ವರ್ಷದಂತೆ ಈ ವರ್ಷ ಕೂಡ ಬೀದರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಅಚ್ಚುಕಟ್ಟಾಗಿ ಮತ್ತು ಕಾಪಿ ಮುಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜೂನ್ 19 ರಂದು ನಡೆದ ಜೂನ್-ಜುಲೈ-2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪೂರ್ವಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ…
Read More »ಶಾಲಾ ಪ್ರವೇಶ ಶುಲ್ಕದಲ್ಲಿ ವಿನಾಯ್ತಿ ನೀಡಿ: ಸಚಿವ ಚವ್ಹಾಣ್ ಮನವಿ.
ಶಾಲಾ ಪ್ರವೇಶ ಶುಲ್ಕದಲ್ಲಿ ವಿನಾಯ್ತಿ ನೀಡಿ: ಸಚಿವ ಚವ್ಹಾಣ್ ಮನವಿ. ಬೀದರ: ಪ್ರಸಕ್ತ ವರ್ಷ ಕೋರೋನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲಾ ಪ್ರವೇಶ ಶುಲ್ಕದಲ್ಲಿ ವಿನಾಯ್ತಿ ನೀಡಬೇಕು. ಮಾನವೀಯತೆ ದೃಷ್ಟಿಯಿಂದಾಗಿ ಬಡ ಮಕ್ಕಳಿಗೆ ಶುಲ್ಕ ಕೈಬಿಡಬೇಕು ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಮನವಿ ಮಾಡಿದರು. ಜೂನ್ 19 ರಂದು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ…
Read More »ಹುಮನಾಬಾದ ಎಪಿಎಂಸಿ ಚುನಾವಣೆ. ಮೂರನೇ ಬಾರಿ ಅಧ್ಯಕ್ಷರಾದ ಡಾ। ಭದ್ರೇಶ ಪಾಟೀಲ.
ಹುಮನಾಬಾದ ಎಪಿಎಂಸಿ ಚುನಾವಣೆ. ಮೂರನೇ ಬಾರಿ ಅಧ್ಯಕ್ಷರಾದ ಡಾ। ಭದ್ರೇಶ ಪಾಟೀಲ. ಹುಮನಾಬಾದ: ಪಟ್ಟಣದ ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಡಾ। ಭದ್ರೇಶ ಪಾಟೀಲ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯರಾಗಿ ಕಾಮಶೇಟ್ಟಿ ಪಾಟೀಲ, ಕೂಡ ಅವಿರೋಧ ಆಯ್ಕೆ ನಡೆದಿದೆ. ಶುಕ್ರವಾರ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ತಹಶೀಲ್ದಾರ ನಾಗಯ್ಯಾ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಡಾ। ಭದ್ರೇಶ ಪಾಟೀಲ ಅಧ್ಯಕ್ಷರಾಗಿ…
Read More »ಬೀದರ ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಲಗಾಮು:
ಬೀದರ ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಲಗಾಮು: ಸಚಿವರಾದ ಡಾ.ಕೆ.ಸುಧಾಕರ — ಬೀದರ : ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆಗೆ ವ್ಯವಸ್ಥೆ ಮಾಡಿಸಿ, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ)ಯ ಸುಧಾರಣೆಯ ಬಗ್ಗೆ ಸಮಗ್ರ ಚರ್ಚಿಸಿ, ಇಲ್ಲಿನ ಅವ್ಯವಸ್ಥೆಗೆ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರು ಹೇಳಿದರು. ಜೂನ್ 14ರಂದು ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ಪತ್ರೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು…
Read More »ಹಳ್ಳಿಖೇಡ(ಬಿ) ನೂತನ ಪುರಸಭೆ ಕಟ್ಟಡ ಕಾಮಗಾರಿಗೆ ಶಾಸಕ ಪಾಟೀಲ ಚಾಲನೆ.
ಹಳ್ಳಿಖೇಡ(ಬಿ) ನೂತನ ಪುರಸಭೆ ಕಟ್ಟಡ ಕಾಮಗಾರಿಗೆ ಶಾಸಕ ಪಾಟೀಲ ಚಾಲನೆ. ನಾನು ಗುತ್ತೆದಾರರ ಮುಲಾಜಿನಲ್ಲಿ ಇಲ್ಲ – ಕಳಪೆ ಕಾಮಗಾರಿಗೆ ಸಾರ್ವಜನಿಕರು ಪ್ರಶ್ನಿಸಬೇಕು-ಶಾಸಕ ಪಾಟೀಲ ಹುಮನಾಬಾದ: ಗ್ರಾಮ ಪಂಚಾಯತದಿಂದ ಪುರಸಭೆಯಾಗಿರುವ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕಳಪೆ ಕಾಮಗಾರಿಗೆ ಯಾರು ಆಸ್ಪದ ನೀಡಬಾರದು. ಯಾವ ಗುತ್ತೆದಾರರ ಮುಲಾಜಿನಲ್ಲಿ ನಾನು ಇಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು. ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆ ಪ್ರಾಂಗಣದಲ್ಲಿ…
Read More »


















