ನಿಮ್ಮ ಜಿಲ್ಲೆ
ಕಾನೂನು ಉಲ್ಲಂಘನೆ ಅಂಗಡಿಗಳಿಗೆ ಬೀಗ
ಹುಮನಾಬಾದ: ಲಾಕ್ ಡೌನ್ ಉಲ್ಲಂಘನೆ ಮಾಡಿದ ಪಟ್ಟಣದ ವಿವಿಧ ಅಂಗಡಿಗಳನ್ನು ತಹಶೀಲ್ದಾರ ಹಾಗೂ ಸಿಪಿಐ ನೇತೃತ್ವದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳು ಹೊರತುಪಡಿಸಿ ಇತರೆ ಅಂಗಡಿಗಳು ತೆರೆದಿರುವುದನ್ನು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದರು. ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಯಾವುದೇ ಅಂಗಡಿ ಇಳಿಯುವಂತಿಲ್ಲ. ಅಂಗಡಿಗಳ ಬಾಗಿಲು ತೆರೆದಿದ್ದರೆ,ಅಧಿಕಾರಿಗಳು ಹಾಕಿದ ಸೀಲ್ ಓಪನ್ ಮಾಡಿದರೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಪಟ್ಟಣದ ಸುಮಾರು…
Read More »ಲ್ಯಾಬ್ಟೆಸ್ಟ್ಗೆ ಪ್ರತಿದಿನ 300 ಸ್ಯಾಂಪಲ್ ಕಳುಹಿಸಲು ಸೂಚನೆ
ಬೀದರ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.16ರಂದು ನಡೆದ ವಿಡಿಯೋ ಸಂವಾದದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಇ.ವಿ.ರಮಣರೆಡ್ಡಿ ಅವರು ಗಂಟಲು ದ್ರವ ಮತ್ತು ರಕ್ತದ ಮಾದರಿ ಪರೀಕ್ಷೆಯ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಇದುವರೆಗೆ 642 ಸ್ಯಾಂಪಲ್ ಟೆಸ್ಟ್ ಆಗಿದೆ. ಇನ್ನೂ 1100 ಸ್ಯಾಂಪಲ್ ಟೆಸ್ಟ್ ಮಾಡುವುದು ಬಾಕಿಯಿದೆ ಎಂದು ಜಿಲ್ಲಾ ಸರ್ವೆಲೆನ್ಸ್ ಆಫೀಸರ್ ಡಾ.ಕೃಷ್ಣಾ ರೆಡ್ಡಿ ಅವರು ಮಾಹಿತಿ ನೀಡಿದರು.…
Read More »ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ- ಮೂವರು ವಜಾ
ಬೀದರ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಮತ್ತು ಇಬ್ಬರು ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ಹರಡುತ್ತಿರುವ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ, ಕೋವಿಡ್-19 ವೈರಸ್ ಪತ್ತೆ ಹಚ್ಚುವ ಸರ್ವೇ ಕಾರ್ಯದಲ್ಲಿ ನಿರ್ಲಕ್ಷ್ಯತೆ ವಹಿಸಿರುವುದು ಕಂಡು ಬಂದಿರುವುದಕ್ಕೆ ಹಾಗೂ ಗುತ್ತಿಗೆ ಒಪ್ಪಂದದ ಮತ್ತು ಸೇವಾ ನಿಯಮಗಳನ್ನು ಉಲ್ಲಂಘಿಸಿರುವದಕ್ಕೆ ಒಬ್ಬರು ಕಿರಿಯ ಆರೋಗ್ಯ ಸಹಾಯಕಿ ಮತ್ತು…
Read More »ಹುಮನಾಬಾದ ಬಿಜೆಪಿ ವತಿಯಿಂದ 1 ಲಕ್ಷ ದೇಣಿಗೆ.
ಹುಮನಾಬಾದ: ಬಿಜೆಪಿ ಹುಮನಾಬಾದ ಮಂಡಲ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಒಂದು ಲಕ್ಷ ಹಾಗೂ ಕಲ್ಲೂರ ನಮೋ ಸಂಘದಿಂದ 11,000 ಚಕ್ ತಹಶೀಲ್ದಾರ ಮೂಲಕ ಸಲ್ಲಿಸಲಾಯಿತು. ಮಾಜಿ ಶಾಸಕ ಸುಭಾಷ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಳಕರ್, ಪದ್ಮಾಕರ್ ಪಾಟೀಲ, ವಿನಾಯಕ ಮಂಡಾ, ಮಲ್ಲಿಕಾರ್ಜುನ ಕುಂಬಾರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪ್ರಭಾ, ರಾಜು ಭಂಡಾರಿ, ಗಿರೀಶ್ ಪಾಟೀಲ, ಗೋಪಿ ಮೂಳೆ, ರಮೇಶ ಕಲ್ಲೂರ, ಅನೀಲ ಪಸರಗಿ, ರವಿ ಹೊಸಳ್ಳಿ,…
Read More »ಲಾಕ್ ಡೌನ್ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಅನಿವಾರ್ಯ
ಬೀದರ: ಅನಾವಶ್ಯಕವಾಗಿ ಜಿಲ್ಲಾಡಳಿತ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಸಾರ್ವಜನಿಕರು ಭೇಟಿನೀಡುವುದುಯಾವುದ ಕುಂಟು ನೆ ಪಹೇಳಿಕೊಂಡು ಲಾಕ್ ಡೌನ್ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೆ ಸಮಸ್ಯೆ ಇಲ್ಲ. ಅರ್ಹರಿಗೆ ಆಹಾರ ಧಾನ್ಯ, ಊಟ ವಿತರಣೆ ಆಗುತ್ತಿದೆ. ಜನರು ಸರ್ಕಾರದ ಲಾಕ್ ಡೌನ್ ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕುಂಟು ನೆಪಗಳ ಹೇಳಿಕೊಂಡು…
Read More »ಅಕ್ರಮ ಮದ್ಯ ಮಾರಾಟ ವ್ಯಕ್ತಿ ಬಂಧನ.
ಹುಮನಾಬಾದ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 7.740 ಲೀಟರ್ ಮದ್ಯ ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ತಾಲೂಕಿನ ಜಲಸಂಗಿ ಗ್ರಾಮದ ವಡ್ಡರಗಲ್ಲಿ ಹತ್ತಿರ ಮದ್ಯ ಮಾರಾಟ ಮಾಡುತ್ತಿದ ತುಕಾರಾಮ ವಡ್ಡರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅಬಕಾರಿ ನಿರೀಕ್ಷಕರಾದ ರವೀಂದ್ರ ಪಾಟೀಲ್ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಜೆಟ್ಟೆಪ್ಪ ಬಿ ಬೇಲೂರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯ ಜಪ್ತಿಮಾಡಿದ್ದಾರೆ.…
Read More »ಜಿಲ್ಲಾಡಳಿತಕ್ಕೆ ಸ್ಯಾನಿಟೈಜರ್, ಮಾಸ್ಕ, ಔಷಧಿ ಸಿಂಪಡಣೆ ಯಂತ್ರ ವಿತರಣೆ
ಬೀದರಃ ಕೃಷಿ ಸಮೃದ್ಧಿ ಬೀದರನ ಕಾಶಿಲಿಂಗ ಅಗ್ರಹಾರ ಇವರು ಬೀದರ ಜಿಲ್ಲಾಡಳಿತಕ್ಕೆ ಸೋಮವರ ಸ್ಯಾನಿಟೈಜರ್ ಮತ್ತು 80 ಔಷಧಿ ಸಿಂಪಡಿಸುವ ಬ್ಯಾಟರಿಯುಕ್ತ ಔಷಧಿ ಸಿಂಪಡಣೆ ಸ್ಪ್ರೇಯರ್ಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು. ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ಯಂತ್ರಗಳು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಯಂತ್ರಗಳು ಕಾರ್ಯ ನಿರ್ವಹಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಅಜೀಮ್ ಪ್ರೇಮಜಿ ಫೌಂಡೇಶನ್ ವತಿಯಿಂದ ಜಿಲ್ಲಾ ಸಂಯೋಜಕರಾದ ಶಿವಕುಮಾರ ಸಿ.ಎಂ ಅವರು ಜಿಲ್ಲಾಡಳಿತಕ್ಕೆ…
Read More »ಜಿಲ್ಲೆಯಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು: ಜಿಲ್ಲಾಧಿಕಾರಿ
ಬೀದರ: ಲಾಕ್ ಡೌನ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಿರಾಶ್ರಿತರು ಮತ್ತು ಕಡುಬಡವರಿಗೆ ಆಹಾರ ಮತ್ತು ಆಹಾರಧಾನ್ಯ ಸರಬರಾಜು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ವೇಳೆ ಯಾರು ಕೂಡ ಯಾವುದೇ ಕಾರಣಕ್ಕೂ ಉಪವಾಸ ಇರಬಾರದು. ಇದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹಾದೇವ್ ಹೇಳಿದರು. ಏ. 12ರಂದು ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೆಲವು ಬಡವರಿಗೆ ಎಪಿಎಲ್…
Read More »ಅಂಬುಲೆನ್ಸ್, ಡೆಡ್ ಬಾಡಿ ಕಳಿಸುವಾಗ ನಿಯಮ ಪಾಲಿಸಿ: ಡಿಎಚ್ಓ
ಬೀದರಃ ಆಯಾ ತಾಲೂಕು ಕೇಂದ್ರ ಹಾಗೂ ಪಿಎಚ್ ಸಿ ಮತ್ತು ಸಿಎಚ್ ಸಿ ನಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರಕ್ಕೆ ಅಂಬುಲೆನ್ಸ್ ಕಳಿಸುವಾಗ ನಿಯಮ ಪಾಲನೆ ಮಾಡಬೇಕು. ಮಾರ್ಗಸೂಚಿಯಂತೆ ಶವಸಂಸ್ಕಾರ ಮಾಡಲು ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಾಲೂಕುಮಟ್ಟದ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಏ.12ರಂದು ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದ ಅವರು, ಈ ವೇಳೆಯಲ್ಲಿ ಯಾರೇ…
Read More »ಮುಂಬೈ ಕಡೆಯಿಂದ ಬಂದವರಿಗೆ ಪ್ರವೇಶ ಬೇಡ-ಜಿಲ್ಲಾಧಿಕಾರಿ ಸೂಚನೆ
ಬೀದರಃ ನಿಯಮ ಉಲ್ಲಂಘಿಸಿ, ಅನ್ಯ ಮಾರ್ಗದಿಂದ ಜಿಲ್ಲೆಯ ಹಳ್ಳಿಗಳಿಗೆ ವಿದೇಶ ಮತ್ತು ಹೊರ ರಾಜ್ಯದಿಂದ ಬಂದಿರುವವರು ಎಷ್ಟು ಜನ ಎಂಬುದನ್ನು ಗುರುತಿಸಿ ಅವರಿಗೆ ಕೂಡಲೇ ಕ್ವಾರಂಟೈನ್ ಮಾಡಿ ತೀವ್ರ ನಿಗಾ ವಹಿಸಬೇಕು. ಅಲ್ಲದೆ, ಮಹಾರಾಷ್ಟ್ರದ ಬಾಂಬೆ ಕಡೆಯಿಂದ ಯಾರೇ ಬಂದರೂ ಪ್ರವೇಶ ಕೊಡಬೇಡಿ. ಎಂದು ಜಿಲ್ಲಾಧಿಕಾರಿ ಡಾ..ಹೆಚ್.ಆರ್.ಮಹಾದೇವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಪ್ರಿಲ್ 12ರಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.…
Read More »

















