Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ

ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ

ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ

ಹುಮನಾಬಾದ: ಪಟ್ಟಣದ ವೀರಭ್ರೇಶ್ವರ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಈ ಹಿಂದಿನAತೆ ಬುಧವಾರ ಹಾಗೂ ಭಾನುವಾರ ಸಂತೆ ನಡೆಸುವಂತೆ ಪಟ್ಟಣದ ವ್ಯಾಪರಸ್ಥರು ಒತ್ತಾಯಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಬುಧವಾರ ಹಾಗೂ ಭಾನುವಾರ ಸಂತೆ ನಡೆಯುತ್ತಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಥೇರ ಮೈದಾನಕ್ಕೆ ಸಂತೆ ಸ್ಥಳಾಂತರಿಸಲಾಗಿತ್ತು. ಆದರೆ, ಇಂದಿಗೂ ಸಂತೆಗಳು ಮರು ಸ್ಥಳದಲ್ಲಿ ಆರಂಭವಾಗದ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪರಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ವ್ಯಾಪಾರ ಇಲ್ಲದೆ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ಸ್ಥಳಿಯ ಆಡಳಿತ ಈ ಹಿಂದಿನAತೆ ಸಂತೆ ನಡೆಸುವಂತೆ ಮಾಡಬೇಕು. ಇಲ್ಲವಾದರೆ ಇಲ್ಲಿನ ವ್ಯಾಪರಸ್ಥರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪ್ರಸಂಗ ಬರಬಹುದು ಎಂದು ಜೆಡಿಎಸ್ ಮುಖಂಡ ಮಹೇಶ ಅಗಡಿ ಹಾಗೂ ವ್ಯಾಪರಸ್ಥರಾದ ಪರಶುರಾಮ ಜಾಜಿ, ವೀರಪ್ಪ ಚಟ್ಟಿ, ಬಸಪ್ಪಾ ಭಾವಿ, ರಾಜು ಅಗಡಿ, ಉದಯಕುಮಾರ ಜಾಜಿ, ಖಂಡು ಗೌಳಿ, ಶಿವಕುಮಾರ ಜಾಜಿ ತಿಳಿಸಿದ್ದಾರೆ.

https://play.google.com/store/apps/details?id=kknewsonline.in

ಸಧ್ಯ ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾಗುತ್ತಿದ್ದು, ಸೂಕ್ತ ಮುಂಜಾಗೃತೆಯಿಂದ ವ್ಯಾಪರ ವಹಿವಾಡಿಗೆ ಪುರಸಭೆ ಹಾಗೂ ತಾಲೂಕು ಆಡಳಿತ ಸಹಕಾರ ನೀಡಬೇಕು. ಸಂತೆಗಳು ನಡೆಯುವುದರಿಂದ ಮಾತ್ರ ಪಟ್ಟಣದ ಹಳೇ ಪ್ರದೇಶದಲ್ಲಿ ವ್ಯಾಪರ ನಡೆಯುತ್ತದೆ. ಸಂತೆ ಇಲ್ಲವಾದರೆ ಅಧಿಕ ಬಾಡಿಗೆ ನೀಡಿದ ವ್ಯಾಪರಸ್ಥರು ಕಠಿಣ ಸಮಸ್ಯೆ ಎದುರಿಸುವಂತಾಗುತ್ತಿದೆ. ಅಧಿಕಾರಿಗಳು ಮುತುವರ್ಜಿವಹಿಸಿ ಮತ್ತೆ ಸಂತೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…