Home ನಿಮ್ಮ ಜಿಲ್ಲೆ ಬೀದರ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ : ಉಮೇಶ ಬಿರರ್ಬಿಟೆ ಅಟ್ಟೂರ್

ಹುಮನಾಬಾದ: ಬಡವಪರ ಹೊಟ್ಟೆತುಂಬಿಸುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ ಎಂದು ಭಾರತ ಸರ್ಕಾರದ ಆಹಾರ ನಿಗಮ ಮಂಡಳಿಯ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್ ಅಧಿಕಾರಿಗಳಿಗೆ ಸೂಚಿಸಿದರು.


ಹುಮನಾಬಾದ್ ಪಟ್ಟಣದ ಹೊರವಲಯದ ಪಡಿತರ ವಿತರಣೆ
ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಜೊತೆಗೆ ಪಡಿತರ ವಿತರಣೆ ಹಾಗೂ ಶಾಲಾ ಮಕ್ಕಳ ಮಧ್ಯಾನದ ಬಿಸಿ ಊಟ ಯೋಜನೆಗೆ ಪೂರೈಕೆ ಆಗುತ್ತಿರುವ ಆಹಾರ ಧಾನ್ಯಗಳ ಕುರಿತು ಚರ್ಚೆ ನಡೆಸಿದರು.
ಬೀದರ್ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಪಡಿತರ ಅಕ್ಕಿ ಎಲ್ಲಿಂದ ಸೋರಿಕೆ ಯಾಗುತ್ತಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಬಡವರ ಹೊಟ್ಟೆ ತುಂಬುವ ಅಕ್ಕಿಯಲ್ಲಿ ಯಾವ ಅಧಿಕಾರಿಗಳು ಶಾಮೀಲಾಗದಂತೆ ಎಚ್ಚರಿಕೆ ವಹಿಸಿ. ಪಡಿತರ ಚೀಟಿದಾರರು ಅಕ್ಕಿ ಮಾರಾಟ ಮಾಡಿಕೊಳ್ಳುತ್ತಿದ್ದರೆ ಅಂತಹ ಪಡಿತರ ಚೀಟಿ ರದ್ದುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪಡಿತರ ಗೊದಾಮಿನ ಅಧಿಕಾರಿಗಳು ಇದ್ದರು.

Date: 10-09-2020    www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…