ನೂರ್ ಧಾಬಾ ಕುಟುಂಬದಿಂದ ವೈದ್ಯರಿಗೆ ಸನ್ಮಾನ.
ನೂರ್ ಧಾಬಾ ಕುಟುಂಬದಿಂದ ವೈದ್ಯರಿಗೆ ಸನ್ಮಾನ.
ಹುಮನಾಬಾದ: ಕೊರೊನಾ ಸೋಂಕಿನಿಂದ ಗುಣಮುಖಗೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದ ನೂರ ಧಾಬಾ ವತಿಯಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ನೂರ ಧಾಬಾ ಕುಟುಂಬದಲ್ಲಿನ ಒಟ್ಟು 40 ಸದಸ್ಯರ ಪೈಕಿ 13 ಜನರಿಗೆ ಪಾಸಿಟಿವ್ ಕಂಡುಬಂದಿದ್ದು, ಒಬ್ಬರು ಹೈದರಾಬಾದ್ ನಗರದಲ್ಲಿ ಚಿಕಿತ್ಸೆ ಪಡೆದಿದ್ದರೆ ಉಳಿದಂತೆ ಎಲ್ಲರೂ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿನ ವೈದ್ಯರು ಸೂಕ್ತ ವ್ಯವಸ್ಥೆಗಳು ಕಲ್ಪಿಸಿ ಸೋಂಕು ಸಾಯುವಂತೆ ಮಾಡಿದ್ದಾರೆ ಎಂದು ಸೈಯದ್ ಅಮಾನ್ವೋಲ್ಲಾ ಹೇಳಿದ್ದು, ಬಕ್ಕರಿ ಈದ್ ನಂತರ ಮತ್ತೆ ನೂರ್ ಧಾಬಾ ಎಂದಿನಂತೆ ತೆರೆದು ಕಾರ್ಯ ನಿರ್ವಹಿಸಲ್ಲಿದೆ ಎಂದು ಹೇಳಿದರು.
ಡಾ। ನಾಗನಾಥ ಹುಲಸೂರೆ, ಸೋಂಕು ಪತ್ತೆಯಾದ ನಂತರ ಎಲ್ಲಾ ರೋಗಿಗಳ ಆರೈಕೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ವೈದ್ಯರ ತಂಡ ಸೋಂಕು ಪತ್ತೆ ಹಚ್ಚಲು ನಿರಂತರ ಕೆಲಸ ಮಾಡುತ್ತಿದೆ. ನೂರ್ ಕುಟುಂಬದ ಸದಸ್ಯರು ಕೂಡ ಸೂಕ್ತ ಸಹಕಾರ ನೀಡಿದ್ದಾರೆ. ವೈದ್ಯರ ಸೇವೆ ಗುರುತಿಸಿ ಸನ್ಮಾನಿಸಿತುವುದು ವೈದ್ಯರ ಕೆಲಸ ಹೆಚ್ಚಿಸಿದಂತಾಗಿದೆ ಎಂದರು.
ಡಾ। ದೀಲಿಪ ಡೊಂಗ್ರೆ, ಡಾ। ಬಸವಂತ ಗುಮ್ಮೆ, ಡಾ। ಪ್ರವೀಣ, ಡಾ। ವಿಶ್ವಾವ, ಡಾ। ಮುಜಾಫರ್, ಸುಭಾಶ ಅಷ್ಟಿಕರ, ಸೈಯದ್ ಕಲಿಮುಲ್ಲಾ, ಅಮಾನವೂಲ್ಲಾ, ನುಮಾನ್ ಉಲ್ಲಾ, ಮುಕರಮ್ ಝಾ, ರೀಹಾನ್ ಸೇರಿದಂತೆ ಅನೇಕರು ಇದ್ದರು.
Date: 31-07-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















