ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ
ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ
ಹುಮನಾಬಾದ: ಮಾದಿಗ ದಂಡೋರ್ ಹೋರಾಟ ಸಮಿತಿ ವತಿಯಿಂದ ಸೆ.14ರಂದು ಆಯಾ ಕ್ಷೇತ್ರದ ಶಾಕಸ ಮನೆ ಎದುರಿಗೆ ಧರಣಿ ಸತ್ಯಾಗ್ರಹ ಹಾಗೂ ಸೆ.18ರಂದು ನ್ಯಾಯ ಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನಮಾಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ.
![]()
https://play.google.com/store/apps/details?id=kknewsonline.in
ಹುಮನಾಬಾದ ಪಟ್ಟಣದ ಶನಿವಾರ ನಡೆಸಿದ ಪೂರ್ವ ಸಿದ್ಧತಾ ಸಭೆ ಹಾಗೂ ಭೀತಿ ಪತ್ರ ಬಿಡುಗಡೆ ಸಭೆಯಲ್ಲಿ ಅವರು ಮಾತನಾಡಿದರು. ಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಸರ್ಕಾರ ಸದಾಶಿವ ಾಯೋಗ ವರದಿಯಂತೆ ನ್ಯಾಯ ನೀಡುವರೆಗೂ ಹೋರಾಟ ನಡೆಸಲು ಮುಖಂಡರು ಮುಂದಿರಬೇಕು ಎಂದು ತಿಳಿಸಿದರು. ಬೀದರ ಜಿಲ್ಲಾಧ್ಯಕ್ಷ ಪ್ರದೀಪ ಎಚ್, ತಾಲೂಕು ಅಧ್ಯಕ್ಷ ರವಿ ನಿಜಾಂಪೂರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ ಕಾಳಮದರಗಿ, ಡೆವಿಡ್ ವಾಡೆಕರ್, ಜೈಶಿಲ ಕಲವಾಡೆ, ರಾಜಕುಮಾರ ಬೇನಚಿಂಚೋಳಿ, ಮಹೇಶ ಕಟ್ಟಿ, ಸುರೇಶ ಮಂಠಾಳಕರ್, ಸಾಮುವೆಲ್ ವಾಡೆಕರ್, ಅಮರ ನಾಮದಾಪೂರ, ಲೊಕೇಶ ನೆಳಗೆ ಸೇರಿದಂತೆ ಅನೇಕರು ಇದ್ದರು.
Dtae:12-09-2020 More News Click Here :-
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















