ರೈತರಿಗೆ ಸಕ್ಕರೆ ಜತೆಗೆ ಹೆಚ್ಚುವರಿ ಹಣ -ಉಮಾಕಾಂತ ನಾಗಮಾರಪಳ್ಳಿ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ೨೦೧೮-೧೯ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ದಸರಾ ಕೊಡುಗೆಯಾಗಿ ಪ್ರತಿ ಟನ್‌ಗೆ ರೂ. ೩೭ ಹೆಚ್ಚುವರಿ ಬೆಲೆ ಹಾಗೂ ಉಚಿತ ಸಕ್ಕರೆ ನೀಡುವುದಾಗಿ ಕಾರ್ಖಾನೆಯ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಘೋಷಿಸಿದ್ದಾರೆ.
ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಬುಧವಾರ ನಡೆದ ಕಾರ್ಖಾನೆಯ ೩೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಬ್ಬು ಪೂರೈಕೆ ಮಾಡಿದ ರೈತರಿಗೆ ಈಗಾಗಲೇ ಪ್ರತಿ ಟನ್‌ಗೆ ರೂ. ೧,೮೬೩ ಬೆಲೆ ಸಂದಾಯ ಮಾಡಲಾಗಿದೆ. ಇದೀಗ ಹೆಚ್ಚುವರಿಯಾಗಿ ರೂ. ೩೭ ಪಾವತಿಸಲಿರುವುದರಿಂದ ಪ್ರತಿ ಟನ್‌ಗೆ ರೂ. ೧,೯೦೦ ಬೆಲೆ ಕೊಟ್ಟಂತಾಗಲಿದೆ ಎಂದ ಅವರು, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಸದಸ್ಯ ರೈತರಿಗೆ ಪ್ರತಿ ಟನ್‌ಗೆ ಒಂದು ಕೆ.ಜಿ. ಹಾಗೂ ಅನುತ್ಪಾದಕ ಸದಸ್ಯರಿಗೆ ತಲಾ ೫ ಕೆ.ಜಿ. ಸಕ್ಕರೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
೨೦೧೯-೨೦ನೇ ಹಂಗಾಮಿನಲ್ಲಿ ಕಾರ್ಖಾನೆಯು ೩.೫ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ಈಗಾಗಲೇ ೨೧,೦೯೯ ಎಕರೆ ಕಬ್ಬು ಬೆಳೆ ಕ್ಷೆÃತ್ರದ ನೋಂದಣಿ ಆಗಿದೆ. ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಕ್ಟೊÃಬರ್ ಎರಡನೇ ವಾರದಲ್ಲಿ ಹಂಗಾಮು ಆರಂಭಿಸಲು ಉದ್ದೆÃಶಿಸಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ರೈತರ ಜಮೀನುಗಳ ಸಮೀಕ್ಷೆ ನಡೆಸಿದ್ದು, ಮಾಹಿತಿಯನ್ನು ಗಣಕೀಕರಣಗೊಳಿಸಿ, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸದಸ್ಯ ರೈತರು ಹೊರ ರಾಜ್ಯಗಳಿಗೆ ಕಬ್ಬು ಸಾಗಿಸದೆ, ಕಾರ್ಖಾನೆಗೆ ಪೂರೈಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಖಾನೆಯ ಉಪಾಧ್ಯಕ್ಷ ಕಾಶಪ್ಪ ಧನ್ನೂರ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ, ನಿರ್ದೇಶಕ ರಾಜಕುಮಾರ ಕರಂಜಿ, ಚಂದ್ರಕಾಂತ ಪಾಟೀಲ, ಶಂಕರೆಪ್ಪ ಪಾಟೀಲ, ಶಿವಬಸಪ್ಪ ಚನ್ನಮಲ್ಲೆ, ಬಾಲಾಜಿ ಚವಾಣ್, ಚಂದ್ರಕಾಂತ ವಾಗ್ದಾಳೆ, ಸಿದ್ರಾಮ ವಾಘಮಾರೆ, ಚಂದ್ರಮ್ಮ ಪಾಟೀಲ, ಮಲ್ಲಮ್ಮ ಪಾಟೀಲ, ವಿಜಯಕುಮಾರ ಬಸವಣಪ್ಪ ಪಾಟೀಲ, ಝರೆಪ್ಪ ಮಮದಾಪುರೆ, ಶಶಿಕುಮಾರ ಪಾಟೀಲ ಸಂಗಮ, ವೀರಶೆಟ್ಟಿ ಪಟ್ನೆ, ಘಾಳೆಪ್ಪ ಚಟ್ನಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಸಂಗಮೇಶ ಪಾಟೀಲ ಅಲಿಯಂಬರ್, ಬಸವರಾಜ ಹೆಬ್ಬಾಳೆ, ಸುನೀಲಸಿಂಗ್ ಹಜಾರಿ, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಕಬ್ಬು ಅಭಿವೃದ್ಧಿ ಅಧಿಕಾರಿಗಳಾದ ಕಾಶೀನಾಥ ಕಾಡಾದೆ, ವಿನೋದಕುಮಾರ ಕೋಟೆ ಸೇರಿದಂತೆ ಅನೇಕರು ಇದ್ದರು.
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾ…


















