Home ನಿಮ್ಮ ಜಿಲ್ಲೆ ಬೀದರ ಬಿಜೆಪಿ ಸೇರ್ಪಡೆಗೊಂಡ ಸಂಜಯ್ ಖೇಣಿ ಮುಂದಿನ ನಡೆ ಏನು..?

ಬಿಜೆಪಿ ಸೇರ್ಪಡೆಗೊಂಡ ಸಂಜಯ್ ಖೇಣಿ ಮುಂದಿನ ನಡೆ ಏನು..?

ಬಿಜೆಪಿ ಸೇರ್ಪಡೆಗೊಂಡ ಸಂಜಯ್ ಖೇಣಿ ಮುಂದಿನ ನಡೆ ಏನು..?

ಬೀದರ : ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಸಂಜಯ್ ಖೇಣಿ ಬಿಜೆಪಿ ರಾಜ್ಯಾಧ್ಯಕ್ಷರ ನಳೀನ್ ಕುಮಾರ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸಧ್ಯ ಅನೇಕ ಚರ್ಚೆಗಳಿಗೆ ಗ್ರಾಸವಾಗಿದೆ.

ಸಂಜಯ್ ಖೇಣಿ ಯಾವುದೇ ಒಂದು ಹೆಜ್ಜೆ ಮುಂದೆ ಇಡಬೇಕಾದರೆ ನೂರುಬಾರಿ ಯೋಚನೆಮಾಡಿ ಇಡುತ್ತಾರೆ ಎಂದು ಜನರು ಮಾತಾಡುತ್ತಾರೆ. ಬಿಜೆಪಿ ಸೇರ್ಪಡೆಯ ಹಿಂದೆ ಅವರ ಉದ್ದೇಶ ಏನು ಎನ್ನುವುದರ ಕುರಿತು ಜನರು ಮಾತಾಡುತ್ತಿದ್ದಾರೆ. ಈ ಬಾರಿಕೂಡ ಬಿಜೆಪಿ ಪಕ್ಷದ ಮುಖಂಡರ ಜೊತೆಗೆ ಸುಧೀಘ ಚರ್ಚೆನಡೆಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗಾದರೆ ಮುಂದಿನ 2023ರಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಬೀದರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ನಡೆಸುವುದು ಎನ್ನಲಾಗುತ್ತಿದೆ. ಅಲ್ಲದೆ, ಸಧ್ಯ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ವಿಶೇಷ ಅನುದಾನ ತಂದು ಮತ್ತೆ ಕಾರ್ಖಾನೆ ಆರಂಭಿಸುವ ಜೊತೆಗೆ ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿವ ಸಾಧ್ಯತೆಗಳು ಹೆಚ್ಚಿವೆ ಎಂದು ಕರ‍್ಯಕರ್ತರು ಹೇಳುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸಂಜಯ್ ಖೇಣಿ ವಿರುದ್ಧ ಬಿಜೆಪಿ ಪಕ್ಷದವರೆ ವಿರೋಧ ಮಾಡುತ್ತಿದ್ದರು. ಬಿಎಸ್‌ಎಸ್‌ಕೆ ಕಾರ್ಖಾನೆ ಬಂದ್ ಆಗಲ್ಲು ಸಂಜಯ್ ಖೇಣಿ ಕಾರಣ ಎಂದು ಆರೋಪಿಸುತ್ತಿದರು. ಸಕ್ಕರೆ ಕಾರ್ಖಾನೆ ಚುನಾವಣೆ ಮುಂದೊಡುವಂತೆ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿರುವುದು ಇಲ್ಲಿ ಸ್ಮರಿಸಬಹುದು. ಇದೀಗ ಸಂಜಯ ಖೇಣಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷದ ಮುಖಂಡರ ನಡೆ ಮುಂದಿನ ದಿನಗಳಲ್ಲಿ ಹೇಗೆ ಇರುತ್ತೆ ಎಂದು ಕಾದುನೋಡಬೇಕಾಗಿದೆ.

Download Mobile App: https://play.google.com/store/apps/details?id=kknewsonline.in ಈ ಕುರಿತು ಸಂಜಯ ಖೇಣಿ ಪ್ರತಿಕ್ರೀಯೆ ನೀಡಿದ್ದು, ಕಳೆದ ಎರೆಡು ವರ್ಷಗಳಿಂದ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಕೆಲ ವಿಷಯಕ್ಕೆ ಬಿಜೆಪಿ ತೊರೆಯುವ ಸಂದರ್ಭ ಬಂದಿತ್ತು. ಆದರೆ, ಇದೀಗ ಮತ್ತೆ ರಾಜ್ಯಾಧ್ಯಕ್ಷರು ಹಾಗೂ ಇತರೆ ಸಚಿವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಯಾವುದೇ ಹುದ್ದೆ ಅಥವಾ ಸ್ಥಾನಮಾನ ನೀಡುವಂತೆ ನಾನು ಪಕ್ಷದ ವರಿಷ್ಠರಿಗೆ ಕೇಳಿಲ್ಲ. ಪಕ್ಷದ ಕರ‍್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷದವರು ನೀಡುವ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸುವುದಾಗಿ ತಿಳಿದಿದ್ದಾರೆ.

Date: 09-03-2021

Main

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …