ಬಾಲ ಬಿಚ್ಚಿದ್ರೆ ಹುಷಾರ್
ಶಾಂತಿ ಕದಡಿದರೆ ಪರಿಣಾಮ ನೆಟ್ಟಿಗಿರಲ್ಲ
ಹುಮನಾಬಾದ: ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗುರುತಿಸಿಕೊಂಡ ರೌಡಿಗಳು ಮತ್ತೊಮ್ಮೆ ಬಾಲ ಬಿಚ್ಚಿದ್ರೆ ಹುಷಾರ್ ಎಂದು ಹುಮನಾಬಾದ ಪೊಲೀಸ್ ಠಾಣೆಯ ಸಿಪಿಐ ಜೆ.ಎಸ್ ನ್ಯಾಮೆಗೌಡರ್ ಹಾಗೂ ಪಿಎಸ್ಐ ರವಿ ಕ್ಲಾಸ್ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.
ಟಿಪ್ಪು ಜಯಂತಿ, ಈದ್ ಮಿಲಾದ್ ಹಾಗೂ ರಾಮ ಮಂದಿರ ತೀರ್ಪು ಹಿನ್ನೆಲೆಯಲ್ಲಿ ಮುಂಜಾಗೃತೆ ಹಿನ್ನೆಲೆಯಲ್ಲಿ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಠಾಣೆಯ ಪ್ರಾಂಗಣದಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬರಲಿರುವ ವಿವಿಧ ಧಾರ್ಮಿಕ ಚರಣೆಗಳು ಹಾಗೂ ರಾಮ ಮಂದಿರ ತೀರ್ಪು ಬರಲ್ಲಿದ್ದು, ಯಾವುದೇ ವ್ಯಕ್ತಿ ಕಾನೂನಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಕದಡಿದರೆ ಪರಿಣಾಮ ನೆಟ್ಟಿಗಿರಲ್ಲ. ಕುಕೃತ್ಯಗಳಲ್ಲಿ ತೊದಡಗಿದರೆ ಸುಮ್ಮನಿರೋದಿಲ್ಲ ಎಂದು ಪಿಎಸ್ಐ ರವಿ ಎಚ್ಚರಿಸಿದರು. ಇನ್ನು ಅನೇಕ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ನಾಳೆ ಕ್ಲಾಸ್ ಮುಂದುವರೆಸಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Date:07-11-2019
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …


















