Home ಸುದ್ದಿಗಳು ರಾಜ್ಯ ಸುದ್ದಿ ಜ.2ರಂದು ತುಮಕೂರು ಜಿಲ್ಲೆಗೆ ಪ್ರಧಾನಿ ಮೋದಿ

ಜ.2ರಂದು ತುಮಕೂರು ಜಿಲ್ಲೆಗೆ ಪ್ರಧಾನಿ ಮೋದಿ

ಕರ್ಮಣ್ಯ ಪ್ರಶಸ್ತಿ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ

ಹಾಸನ: ತುಮಕೂರು ಜಿಲ್ಲೆಯಲ್ಲಿ ಜನವರಿ 2 ರಂದು ನಡೆಯುವ ಕರ್ಮಣ್ಯ ಪ್ರಶಸ್ತಿ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮೀಸುತ್ತಿರುವ ಕುರಿತು ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜನವರಿ 2 ರಂದು ನಡೆಯುವ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ರೈತ ಪ್ರತಿನಿಧಿಗಳನ್ನು ಕಳುಹಿಸುವ ಕುರಿತು ಪೂರ್ವಭಾವಿ ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ, ಹಾಸನ ಜಿಲ್ಲೆಯಿಂದಲೂ ಹೆಚ್ಚಿನ ರೈತರನ್ನು ಆಗಮೀಸುವಂತೆ ಕೊರಿದರು.

ಜನವರಿ 2 ರಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿಯವರು ತುಮಕೂರಿಗೆ ಆಗಮಿಸಲಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರವೂ ಅನುದಾನ ಒದಗಿಸುತ್ತಿದೆ. ತುಮಕೂರು ಸುತ್ತಮುತ್ತಲ ಜಿಲ್ಲೆಗಳಸಾವಿರಾರು ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಸನ ಜಿಲ್ಲೆಗೂ ಸರ್ಕಾರದಿಂದ 60 ಬಸ್‍ಗಳನ್ನು ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.

ಜಿಲ್ಲಾ ರೈತ ಮುಖಂಡರು, ಪ್ರಗತಿಪರ ಕೃಷಿಕರು, ಸಾವಯವ ಕೃಷಿಕರು, ತೋಟದ ಮಾಲೀಕರು ಆಸಕ್ತರನ್ನು ಆಹ್ವಾನಿಸಿ ಕರೆ ತರುವಂತೆ ಮತ್ತು ಯಾವುದೇ ಲೋಪಗಳಿಲ್ಲದಂತೆ ಸಮನ್ವಯ ಮಾಡುವಂತೆ ಸಚಿವರು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ಧಾರಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಇನ್ನಷ್ಠು ರೈತರು ಅಪೇಕ್ಷಿಸಿದ್ದಲ್ಲಿ ಹೆಚ್ಚಿನ ಬಸ್‍ಗಳನ್ನು ಒದಗಿಸಿಕೊಡಲಾಗುವುದು. ಆದರೆ ಡಿ.30 ರೊಳಗೆ ಈ ಬಗ್ಗೆ ಅಂತಿಮ ವಿವರವನ್ನು ತಮಗೆ ಒದಗಿಸುವಂತೆ ಸಚಿವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿದ್ದು, ಸೋಮವಾರದ ಸಂಜೆಯೊಳಗೆ ಅಂತಿಮ ಪಟ್ಟಿ ತಯಾರಿಸಲಾಗುವುದು. ಈಗಾಗಲೇ ಎಲ್ಲಾ ತಾಲ್ಲೂಕು ತಹಶೀಲ್ದಾರರುಗಳಿಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು. ಎಲ್ಲಾ ತಹಶೀಲ್ದಾರರು ತಾಲ್ಲೂಕು ಮಟ್ಟದಲ್ಲಿ ವ್ಯವಸ್ಥಿತ ಯೋಜನೆ ರೂಪಿಸಿ ರೈತರನ್ನು ಕಳುಹಿಸಿಕೊಡುವಂತೆ ಅವರು ಸೂಚಿಸಿದರು.

ಉಪವಿಭಾಗಾಧಿಕಾರಿ ಡಾ|ನವೀನ್ ಭಟ್, ಜಂಟಿ ಕೃಷಿ ನಿರ್ದೇಶಕರಾದ ಡಾ| ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಡಾ. ಮಂಜುನಾಥ್, ತಹಶೀಲ್ದಾರ್ ಮೇಘನಾ ಮತ್ತಿತರರು ಹಾಜರಿದ್ದರು.

 

Date: 28-12-2019 Time:4:45PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…