Home ನಿಮ್ಮ ಜಿಲ್ಲೆ ಬೀದರ ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ.

ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ.

ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ.

ಬೀದರ: ಜೆಡಿಎಸ್ ಪಕ್ಷಕ್ಕೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ನಸೀಮೊದ್ದೀನ್ ಪಟೇಲ್ ರಾಜೀನಾಮೆ ನೀಡಿದ್ದಾರೆ.

ನಸಿಮೊದ್ದೀನ್ ಪಟೇಲ್ ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ದಿ। ಮೇರಾಜೋದ್ದಿನ್ ಪಟೇಲ್ ಅವರ ಸಹೋದರೂ ಕೂಡ ಹೌದು. ಮೀರಾಜೋದಿನ ಪಟೇಲರ ನಿಧನದ ನಂತರ ನಡೆದ 2013, 2018 ವಿಧಾನ ಸಭೆ ಚುನಾವಣೆಯಲ್ಲಿ ಹುಮನಾಬಾದ ಮತ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಸಿಮೊದ್ದೀನ್ ಪಟೇಲ ಸ್ಪರ್ಧೆ ನಡೆಸಿ ಸೋಲು ಅನುಭವಿಸಿದರು.

ಇದೀಗ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿ ಬೀದರ್ ದಕ್ಷಿಣದಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ನಡೆಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಸಧ್ಯ ಬೀದರ ದಕ್ಷಿಣ ಕ್ಷೇತ್ರದಲ್ಲಿ ಬಂಡಾಪ್ಪಾ ಖಾಶೆಂಪೂರ್ ಶಾಸಕರಾಗಿದ್ದು, ಜೆಡಿಎಸ್ ಪಕ್ಷದಿಂದ ಟಿಕೆಟ್ ದೊರೆಯುವುದು ಬಹುತೇಕ ಅನುಮಾನ ಎಂಬ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

Date: 26-07-2022 / 1:30pm / www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…