ಆಯುಕ್ತರಿಂದ ಮಹಿಳಾ ಮಹಾವಿದ್ಯಾಲಯ ಪರಿಶೀಲನೆ
ಬೀದರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ್.ಪಿ ಜನವಾಡಾ ಹತ್ತಿರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೆ ಅಲ್ಲಿನ ಮೂಲಭೂತ ಸೌಕರ್ಯ, ಕಾಲೇಜಿನ ಬೇಕು ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಸರ್ಕಾರಿ ಕಟ್ಟಡವನ್ನು ನಮ್ಮ ಕಾಲೇಜಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಜಾಗ ಮತ್ತು ಕಟ್ಟಡವನ್ನು ಖಾಯಂ ಆಗಿ ನೀಡುವಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಆಯುಕ್ತರಲ್ಲಿ ಮನವಿ ಮಾಡಿದರು.
ಕಾಲೇಜಿನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯದ ಕೊರತೆಯಿದೆ. ವಿದ್ಯಾರ್ಥಿಗಳಿಗಾಗಿ ಭೌತಶಾಸ್ತç ಮತ್ತು ಕಂಪ್ಯೂಟರ್ ಪ್ರಯೋಗಾಲಯದ ಅಗತ್ಯತೆ ಇದೆ ಎಂದು ಆಯುಕ್ತರಲ್ಲಿ ಕೋರಿದರು. ಕಾಲೇಜಿಗೆ ಖಾಯಂ ಆಗಿ ಜಾಗ ಕಲ್ಪಿಸುವುದಕ್ಕೆ ಸಂಬAಧಿಸಿದAತೆ ಆಯುಕ್ತಾಲಯದಲ್ಲಿ ಚರ್ಚಿಸುವುದಾಗಿ ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ರಾಜಪ್ಪ, ಉಪನ್ಯಾಸಕರಾದ ವಿದ್ಯಾ ಪಾಟೀಲ್, ಮನೋಜಕುಮಾರ, ಮನೋಹರ ಮೇತ್ರೆ, ಸಂಜುಕುಮಾರ ಅಪ್ಪೆ, ಸಚ್ಚಿದಾನಂದ ಕುಮಾರ, ಡಾ.ಭೀಮಶಾ, ಡಾ.ಉಮಾಕಾಂತ, ಶ್ರೀನಿವಾಸ ರೆಡ್ಡಿ, ಗ್ರಂಥಪಾಲಕರಾದ ಪಾರ್ವತಿ ಉಪಸ್ಥಿತರಿದ್ದರು.
Date;15-11-2019
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















